alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಯನ್ನೇ ಸ್ಮಶಾನ ಮಾಡಿದ ಸ್ವಯಂಘೋಷಿತ ದೇವಮಹಿಳೆ

gun

ಹರಿಯಾಣದಲ್ಲಿ ಸ್ವಯಂಘೋಷಿತ ದೇವಮಹಿಳೆಯೊಬ್ಬಳು ಸಂಭ್ರಮಾಚರಣೆಗೆ ಮದುವೆ ಮನೆಯಲ್ಲಿ ಗುಂಡು ಹಾರಿಸಿ ವರನ ಚಿಕ್ಕಮ್ಮನನ್ನೇ ಹತ್ಯೆ ಮಾಡಿದ್ದಾಳೆ.

ಕರ್ನಲ್ ನಗರದಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ಸ್ವಯಂಘೋಷಿತ ದೇವಮಹಿಳೆ ದೇವಾ ಠಾಕೂರ್ ಮತ್ತಾಕೆಯ ಬೆಂಬಲಿಗರು ಬಂದಿದ್ರು. ಮದುವೆಯಲ್ಲಿ ಸಂಭ್ರಮಾಚರಣೆ ಮಾಡಲು ಅಂತಾ ದೇವಮಹಿಳೆ ತನ್ನ ಬಳಿಯಿದ್ದ ಗನ್ ನಿಂದ ಗುಂಡು ಹಾರಿಸಿದ್ದಾಳೆ. ಆಕೆಯ ಬೆಂಬಲಿಗರು ಕೂಡ ಅತಿಯಾದ ಉತ್ಸಾಹದಲ್ಲಿ ಗುಂಡು ಸಿಡಿಸಿದ್ದಾರೆ.

ಎಲ್ಲರೂ ಡಾನ್ಸ್ ವೇದಿಕೆಯತ್ತ ಗುಂಡು ಹಾರಿಸಿದ್ದು, ಅಲ್ಲಿ ನಿಂತಿದ್ದ ವರನ ಚಿಕ್ಕಮ್ಮನಿಗೆ ಗುಂಡು ತಗುಲಿ ಆಕೆ ಅಲ್ಲೇ ಕುಸಿದು ಬಿದ್ರು. ಗುಂಡು ತಗುಲಿ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡ್ರು. ಕೂಡಲೇ ಸ್ವಯಂಘೋಷಿತ ದೇವಮಹಿಳೆ ಮತ್ತಾಕೆಯ ಶಿಷ್ಯರು ಅಲ್ಲಿಂದ ಓಡಿ ಹೋಗಿದ್ದಾರೆ. ದೇವಾ ಠಾಕೂರ್ ಕೇಸರಿ ಬಟ್ಟೆ ಧರಿಸಿದ್ದು, ಮೈತುಂಬಾ ಆಭರಣ ಹೇರಿಕೊಂಡು ಬಂದಿದ್ಲು. ವರನ ಚಿಕ್ಕಮ್ಮನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಈಗ ಆಕೆ ವಿರುದ್ಧ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...