alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನೊಂದಿಗೆ ಸಮಯ ಕಳೆಯದಿದ್ದಕ್ಕೆ ಪತಿಯ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದ್ಲು ಎರಡನೇ ಪತ್ನಿ

ತನ್ನ ಜೊತೆ ಎರಡನೇ ವಿವಾಹವಾದ ಪತಿ ತನ್ನೊಂದಿಗೆ ಹೆಚ್ಚು ಸಮಯ ಕಳೆಯದೆ ಮೊದಲ ಪತ್ನಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾನೆಂಬ ಕಾರಣಕ್ಕೆ ಆಕ್ರೋಶಗೊಂಡಾಕೆ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿರುವ ಘಟನೆ ಅಸ್ಸಾಂನ ಧುಬ್ರಿ ಪಟ್ಟಣ ಸಮೀಪದ ಗ್ರಾಮದಲ್ಲಿ ನಡೆದಿದೆ.

ಅಸ್ಸಾಂ ರಾಜಧಾನಿ ಗೌಹಾತಿಯಿಂದ 285 ಕಿ.ಮೀ. ದೂರದಲ್ಲಿರುವ ಬಹದೂರಿತಾರ್ ನಲ್ಲಿ ಈ ಘಟನೆ ನಡೆದಿದ್ದು, ಮೊಮೀನ್ ಖಾತೂನ್ ಎಂಬಾಕೆ ತನ್ನ ಪತಿ 30 ವರ್ಷದ ಸೌಫಿರ್ ರೆಹಮಾನ್ ನಿದ್ರೆ ಮಾಡುತ್ತಿದ್ದ ವೇಳೆ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ.

ಮೊಮೀನ್ ಖಾತೂನ್ ಳನ್ನು ಎರಡನೇ ವಿವಾಹವಾಗಿದ್ದ ರೆಹಮಾನ್, ಕೆಲ ದಿನಗಳ ನಂತರ ನಿರ್ಲಕ್ಷಿಸಲಾರಂಭಿಸಿದ್ದನೆನ್ನಲಾಗಿದೆ. ಆಕೆಗೆ ಮತ್ತೊಂದು ಮನೆ ಮಾಡಿಕೊಟ್ಟಿದ್ದ ರೆಹಮಾನ್ ತನ್ನ ಬಹು ಪಾಲು ಸಮಯವನ್ನು ಮೊದಲ ಪತ್ನಿ ಜೊತೆ ಕಳೆಯುತ್ತಿದ್ದು, ಇದು ಮೊಮೀನ್ ಳ ಆಕ್ರೋಶಕ್ಕೆ ಕಾರಣವಾಗಿತ್ತು.

ಶುಕ್ರವಾರಂದು ರೆಹಮಾನ್ ನನ್ನು ಮನೆಗೆ ಕರೆಸಿಕೊಂಡಿದ್ದ ಖಾತೂನ್, ಆತ ಗಾಢ ನಿದ್ರೆಗೆ ಜಾರಿದ ವೇಳೆ ಶನಿವಾರ ಬೆಳಗಿನ ಜಾವ ಆತನ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದ್ದಾಳೆ. ಬಳಿಕ ಅಲ್ಲಿಂದ ಪರಾರಿಯಾಗಲು ಮುಂದಾಗಿದ್ದು, ಆದರೆ ರೆಹಮಾನ್ ನ ಆಕ್ರಂದನ ಕೇಳಿ ಧಾವಿಸಿದ ಸ್ಥಳೀಯರು ಖಾತೂನ್ ಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರಲ್ಲದೇ ರೆಹಮಾನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...