alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಥವಾಗಿ ಬಿದ್ದಿತ್ತು ಸುಟ್ಟು ಕರಕಲಾಗಿದ್ದ ಯುವಕನ ಶವ

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ದಲಿತ ಹುಡುಗನೊಬ್ಬನ ಮೃತದೇಹ ಪತ್ತೆಯಾಗಿದೆ. 17 ವರ್ಷದ ಅಜಯ್ ಜಾತವ್ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ. ಮಾರ್ಚ್ 3ರಂದು ಭಿವಂಡಿಯಲ್ಲಿ ನಡೆದ ಘರ್ಷಣೆ ಬಳಿಕ ಯಾರೋ ಆತನನ್ನು ಕೊಂದು ಸುಟ್ಟು ಹಾಕಿದ್ದಾರೆ ಅಂತಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಆದ್ರೆ ಕೊಲೆಯಾದ ಅಜಯ್ ಘರ್ಷಣೆ ನಡೆದ ಸ್ಥಳದಲ್ಲಿ ಇರಲಿಲ್ಲ. ಅಜಯ್ ಕುಟುಂಬದವರೇ ಎನ್ನಲಾದ 8 ಮಂದಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಪ್ರತಿಭಟನೆ ನಡುವೆಯೇ ಆತನ ಅಂತ್ಯಸಂಸ್ಕಾರ ನಡೆಸಲಾಗಿದೆ.

ಅಜಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಕೆಲವರು ಹೇಳ್ತಿದ್ದಾರೆ. ಈ ಹಿಂದೆ ಕೂಡ ಆತ ಆತ್ಮಹತ್ಯೆಗೆ ಯತ್ನ ಮಾಡಿದ್ದ. ಆದ್ರೆ ಅಜಯ್ ಸಹೋದರ ಹರಿಕಿಶನ್ ಹೇಳೋ ಪ್ರಕಾರ, ಅಂಗಡಿಯಲ್ಲಿದ್ದ ಅಜಯ್ ನನ್ನು ಒಂದಷ್ಟು ಮಂದಿ ಬೇರೆಡೆಗೆ ಕರೆದೊಯ್ದಿದ್ದಾರಂತೆ.

ಆತನನ್ನು ಥಳಿಸಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಅನ್ನೋದು ಆತನ ಆರೋಪ. ನಾಲ್ಕು ದಿನಗಳ ಹಿಂದಷ್ಟೆ ಭಿವಂಡಿಯಲ್ಲಿ ದಲಿತ ಯುವಕನೊಬ್ಬನನ್ನು ಥಳಿಸಿ ಹತ್ಯೆ ಮಾಡಲಾಗಿತ್ತು. ಈಗ ಮತ್ತೆ ಅಂಥದ್ದೇ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...