alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಕನ ಕಾಮತೃಷೆಗೆ ಬಾಲಕಿ ಬಲಿಪಶು

rape_minor3_1501083822_618x347

ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕು ವರ್ಷದ ಮುಗ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಶಾಲಾ ವಾಹನದ ಡ್ರೈವರ್ ಆರೋಪಿ. ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಆದ್ರೆ ಬಾಲಕಿ ಸ್ಥಿತಿ ಸೂಕ್ಷ್ಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದೆಹಲಿಯ ಹರಿದಾಸ್ ನಗರದಲ್ಲಿ ಘಟನೆ ನಡೆದಿದೆ. ಅತ್ಯಾಚಾರಕ್ಕೊಳಗಾದ ಬಾಲಕಿ ನರ್ಸರಿಗೆ ಹೋಗುತ್ತಿದ್ದಳು. ನಿನ್ನೆ ಆರೋಪಿ ಪವನ್ ಕುಮಾರ್ ಎಲ್ಲ ಮಕ್ಕಳನ್ನು ಸ್ಕೂಲ್ ನಿಂದ ಮನೆಗೆ ಕಳುಹಿಸಿದ್ದಾನೆ. ನಂತ್ರ ಈ ಬಾಲಕಿಯನ್ನು ಜನರಿಲ್ಲದ ಸ್ಥಳಕ್ಕೆ ಕರೆದೊಯ್ದು ತನ್ನ ಚಟ ತೀರಿಸಿಕೊಂಡಿದ್ದಾನೆ. ಆಮೇಲೆ ಮಗುವನ್ನು ಮನೆ ಮುಂದೆ ಬಿಟ್ಟು ಪರಾರಿಯಾಗಿದ್ದಾನೆ.

ರಾತ್ರಿ 11 ಗಂಟೆಗೆ ಮಗುವಿಗೆ ನೋವು ಶುರುವಾಗಿದೆ. ಮಗುವಿನ ಪರಿಸ್ಥಿತಿ ನೋಡಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಆಸ್ಪತ್ರೆಗೆ ಬಂದ ಪೊಲೀಸರು ಬಾಲಕಿಯಿಂದ ಮಾಹಿತಿ ಪಡೆದಿದ್ದಾರೆ.

ಬಾಲಕಿ ಹಾಗೂ ಕುಟುಂಬಸ್ಥರ ಹೇಳಿಕೆ ಮೇರೆಗೆ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ. ಆರೋಪಿಗೆ ಮದುವೆಯಾಗಿದ್ದು,ಇಬ್ಬರು ಹೆಣ್ಣು ಮಕ್ಕಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...