alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯೊಬ್ಬಳನ್ನೇ ಪಿಕ್ನಿಕ್ ಗೆ ಕರೆದ್ರು ಶಿಕ್ಷಕರು…!

ಮಧ್ಯಪ್ರದೇಶದ ಸಿವನಿಯಲ್ಲಿ ಇಬ್ಬರು ಶಿಕ್ಷಕರ ವಿರುದ್ಧ ದೂರು ದಾಖಲಾಗಿದೆ. ಸಹ ಶಿಕ್ಷಕಿಯ ವಿಡಿಯೋ ಮಾಡಿ ವಾಟ್ಸ್ ಅಪ್ ನಲ್ಲಿ ಹರಿಬಿಟ್ಟ ಆರೋಪದ ಮೇಲೆ ಇಬ್ಬರು ಶಿಕ್ಷಕರ ವಿರುದ್ಧ ದೂರು ದಾಖಲಾಗಿದೆ.

ಸಿವನಿ ಶಾಲೆಯೊಂದರ ಶಿಕ್ಷಕರು ಪಿಕ್ನಿಕ್ ಆಯೋಜಿಸಿದ್ದರು. ಅದಕ್ಕೆ ಸಹ ಶಿಕ್ಷಕಿಯನ್ನು ಕರೆದಿದ್ದಾರೆ. ಸಹ ಶಿಕ್ಷಕಿ ಕೂಡ ಪಿಕ್ನಿಕ್ ಗೆ ತೆರಳಿದ್ದಾರೆ. ಆದ್ರೆ ಶಿಕ್ಷಕರ ವರ್ತನೆ ಅನುಮಾನ ಮೂಡಿಸಿದೆ. ಶಿಕ್ಷಕರೆಲ್ಲ ಮದ್ಯ ಸೇವಿಸಿ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರು ಎನ್ನಲಾಗಿದೆ. ಇದ್ರಿಂದ ಕಂಗಾಲಾದ ಶಿಕ್ಷಕಿ ಪತಿಗೆ ಕರೆ ಮಾಡಿ ಅಲ್ಲಿಂದ ಮನೆಗೆ ತೆರಳಿದ್ದಾಳೆ.

ಆದ್ರೆ ಶಿಕ್ಷಕಿಯ ವಿಡಿಯೋ ಮಾಡಿ ಅದಕ್ಕೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೆ ಅದನ್ನು ವಾಟ್ಸ್ ಅಪ್ ಗ್ರೂಪ್ ಗೆ ಹಾಕಿದ್ದಾರೆ. ಇದನ್ನು ನೋಡಿದ ಮಹಿಳೆ, ಪತಿ ಜೊತೆ ಠಾಣೆಗೆ ಬಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...