alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯಿಂದ ಮನೆಗೆ ಹೋಗದ ವಿದ್ಯಾರ್ಥಿನಿ ಬಿಚ್ಚಿಟ್ಲು ತಾಯಿ-ಚಿಕ್ಕಪ್ಪನ ಗುಟ್ಟು

ಹರ್ಯಾಣದ ಹಿಸಾರ್ ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಇದು ಮೊದಲಲ್ಲ. ಅನೇಕ ದಿನಗಳಿಂದ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೋಗಲ್ಲ ಎನ್ನುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಶಿಕ್ಷಕರು ವಿಚಾರಿಸಿದಾಗ ತಾಯಿ ಹಾಗೂ ಚಿಕ್ಕಪ್ಪನ ನಡುವಿದ್ದ ಅಕ್ರಮ ಸಂಬಂಧ ಬಯಲಾಗಿದೆ.

ವಿದ್ಯಾರ್ಥಿನಿ ತಾಯಿ ಹಾಗೂ ಚಿಕ್ಕಪ್ಪನ ಮಧ್ಯೆ ಅಕ್ರಮ ಸಂಬಂಧವಿದೆಯಂತೆ. ಇದು ವಿದ್ಯಾರ್ಥಿನಿಗೆ ತಿಳಿದಿದೆ. ಮಗಳಿಗೆ ಸತ್ಯ ಗೊತ್ತಾದ ನಂತ್ರ ತಾಯಿ ಪ್ರತಿದಿನ ಮಗಳಿಗೆ ಹೊಡೆಯುತ್ತಾಳಂತೆ. ಚಿಕ್ಕಪ್ಪ, ತಾಯಿ ಜೊತೆ ಸರಿಯಾಗಿ ವ್ಯವಹರಿಸುವುದಿಲ್ಲವಂತೆ. ಈ ಸಿಟ್ಟನ್ನು ಮಗಳ ಮೇಲೆ ತೀರಿಸಿಕೊಳ್ಳುವ ತಾಯಿ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೋದ ಮೇಲೆ ಸಣ್ಣ ಸಣ್ಣ ಕಾರಣಕ್ಕೂ ಹೊಡೆಯುತ್ತಾಳಂತೆ.

ತಾಯಿ ಹಾಗೂ ಚಿಕ್ಕಪ್ಪನ ವರ್ತನೆಗೆ ಹೆದರಿರುವ ಬಾಲಕಿ ಮನೆಗೆ ಹೋಗದಿರಲು ನಿರ್ಧರಿಸಿದ್ದಾಳೆ. ವಿದ್ಯಾರ್ಥಿನಿ ನೀಡಿದ ಕಾರಣ ಕೇಳಿ ಆಶ್ಚರ್ಯಕ್ಕೊಳಗಾದ ಶಿಕ್ಷಕರು ಪೊಲೀಸ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕಿಯನ್ನು ಆಶ್ರಮದಲ್ಲಿಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...