alex Certify
ಕನ್ನಡ ದುನಿಯಾ       Mobile App
       

Kannada Duniya

5 ನೇ ತರಗತಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬಯಲಾಯ್ತು ಅಸಲಿ ಸತ್ಯ

ಪಾಟ್ನಾದ ಫುಲ್ವಾರಿಯಲ್ಲಿ ಮುಜುಗರದ ಘಟನೆ ನಡೆದಿದೆ. ಶಾಲೆಯೊಂದರ ಪ್ರಿನ್ಸಿಪಾಲ್ ಹಾಗೂ ಶಿಕ್ಷಕ 5ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಿರಂತರ 9 ತಿಂಗಳ ಕಾಲ ಅತ್ಯಾಚಾರವೆಸಗಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿಯಾದಾಗ ವಿಷ್ಯ ಹೊರ ಬಂದಿದೆ.

ಬಾಲಕಿ ಒಂದು ದಿನ ವಾಂತಿ ಮಾಡಿಕೊಂಡಿದ್ದಾಳೆ. ಕುಟುಂಬಸ್ಥರು ವೈದ್ಯರಿಗೆ ತೋರಿಸಿದಾಗ ಗರ್ಭಿಣಿ ಎಂಬ ಸಂಗತಿ ಗೊತ್ತಾಗಿದೆ. ಹೆಚ್ಚು ಮಾರ್ಕ್ಸ್ ಕೊಡುವುದಾಗಿ ನಂಬಿಸ್ತಿದ್ದ ಪ್ರಿನ್ಸಿಪಾಲ್ ಹಾಗೂ ಶಿಕ್ಷಕ ಹೇಸಿಗೆ ಕೆಲಸ ಮಾಡಿದ್ದಾರೆ. 12 ವರ್ಷದ ವಿದ್ಯಾರ್ಥಿನಿ ಗರ್ಭಿಣಿ ಎಂಬ ಸಂಗತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ದಂಗಾಗಿದ್ದಾರೆ.

ಹೆಚ್ಚಿನ ಅಂಕ ಕೊಡುವುದಾಗಿ ಕಚೇರಿಗೆ ಕರೆಯುತ್ತಿದ್ದ ಪ್ರಿನ್ಸಿಪಾಲ್ ಪಕ್ಕದ ರೂಮಿಗೆ ಕರೆದೊಯ್ದು ಅತ್ಯಾಚಾರವೆಸಗುತ್ತಿದ್ದನಂತೆ. ಅದ್ರ ವಿಡಿಯೋ ಕೂಡ ಮಾಡಿದ್ದ ಪ್ರಿನ್ಸಿಪಾಲ್ ಬ್ಲಾಕ್ಮೇಲ್ ಮಾಡಿದ್ದನಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...