alex Certify
ಕನ್ನಡ ದುನಿಯಾ       Mobile App
       

Kannada Duniya

ಸಣ್ಣ ಕಾರಣಕ್ಕೆ ಮಹಿಳೆಯನ್ನು ಹೊಡೆದು ಕೊಂದ್ರು

ಬಿಹಾರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗ್ತಿವೆ. ಬೇಗುಸರಾಯ್ ಪ್ರದೇಶದಲ್ಲಿ ಮೂವರ ಹತ್ಯೆ ಪ್ರಕರಣ ಇನ್ನೂ ಶಾಂತವಾಗಿಲ್ಲ ಆಗ್ಲೇ ರೋಹ್ತಾಸ್ ನಲ್ಲಿ ಮಹಿಳೆಯೊಬ್ಬಳನ್ನು ಹೊಡೆದು ಕೊಲೆ ಮಾಡಲಾಗಿದೆ. ಡೆಹರಿ ಠಾಣಾ ಕ್ಷೇತ್ರದ ಅಂಬೇಡ್ಕರ್ ಚೌಕಿ ಬಳಿ ಮಕ್ಕಳ ಮಧ್ಯೆ ಶುರುವಾದ ಜಗಳ ಎಸ್ಸಿ ಮಹಿಳೆ ಕೊಲೆಯಲ್ಲಿ ಅಂತ್ಯ ಕಂಡಿದೆ.

ಮಕ್ಕಳ ಜಗಳ ದೊಡ್ಡವರಿಗೆ ವರ್ಗವಾಗಿದೆ. ಎರಡೂ ಕುಟುಂಬಗಳು ಎದುರು ಬದುರಾಗಿವೆ. ಕುಟುಂಬದ ಮಧ್ಯೆ ಹಳೆ ದ್ವೇಷವಿತ್ತು ಎನ್ನಲಾಗಿದೆ. ಕೋಲು ಹಿಡಿದು ಜಗಳಕ್ಕಿಳಿದ ಜನರು ಮಹಿಳೆಯನ್ನು ಹತ್ಯೆಗೈದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ನಾಪತ್ತೆಯಾಗಿದ್ದಾನೆ.

ಇತ್ತ ಬೇಗುಸರಾಯ್ ನಲ್ಲಿ 150 ಅಜ್ಞಾತ ಜನರ ವಿರುದ್ಧ ದೂರು ದಾಖಲಾಗಿದೆ. ಶುಕ್ರವಾರ ಶಾಲೆಗೆ ನುಗ್ಗಿ ವಿದ್ಯಾರ್ಥಿನಿ ಅಪಹರಣಕ್ಕೆ ಮುಂದಾಗಿದ್ದ ಮೂವರನ್ನು ಹೊಡೆದು ಕೊಲೆ ಮಾಡಲಾಗಿತ್ತು. ಬಿಹಾರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಕಿಡಿಕಾರಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...