alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರಿಗಾಗಿ ಸೌದಿಗೆ ಹೋದ ಮಹಿಳೆ ಸ್ಥಿತಿ….

racket

ಹೊಟ್ಟೆ ಪಾಡಿಗಾಗಿ ಸೌದಿ ಅರೇಬಿಯಾಕ್ಕೆ ಹೋಗ್ತಾ ಇರುವ ಭಾರತೀಯ ಮಹಿಳೆಯರು ನರಕ ಅನುಭವಿಸುತ್ತಿದ್ದಾರೆ. ನೌಕರಿ ಹೆಸರಿನಲ್ಲಿ ಭಾರತದಿಂದ ಅವರನ್ನು ಕರೆಸಿಕೊಂಡು ವೇಶ್ಯಾವಾಟಿಕೆಗೆ ತಳ್ಳಲಾಗ್ತಾ ಇದೆ. ಇದಕ್ಕೆ ತಾಜಾ ಎರಡು ಉದಾಹರಣೆಗಳು ಸಿಕ್ಕಿವೆ.

ಅಹಮದಾಬಾದ್ ನ ಹಫೀಜಾ ಬಾನು ಹಾಗೂ ಹೈದ್ರಾಬಾದ್ ನ ಫಾತಿಮಾ ನರಕದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದಾರೆ. ಹಫೀಜಾ ಬಾನುವನ್ನು ಅಹಮದಾಬಾದ್ ನ ಏಜೆಂಟ್ ರೆಹನ್ ಮಾಲಿಕ್ ಹಾಗೂ ಮುಂಬೈನ್ ಏಜೆಂಟ್ ಫಾರೂಕ್ ಮನ್ಸೂರಿ ಎಂಬುವವರು ಸೌದಿಗೆ ಕಳುಹಿಸಿಕೊಟ್ಟಿದ್ದರು. ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ಆಸೆ ಹುಟ್ಟಿಸಿದ್ದರು. ಸೌದಿಗೆ ಹೋದ ಮೇಲೆ ಮಾತು ಬದಲಿಸಿದ್ದಾರೆ.

ಮನೆಯೊಂದರಲ್ಲಿ ಕೆಲಸದಾಳುವಾಗಿ ಹಫೀಜಾ ನೇಮಕವಾಗಿದ್ದಾಳೆ.ಆಕೆಗೆ ಪ್ರಚೋದನಕಾರಿ ಬಟ್ಟೆ ಧರಿಸಿ ಹೊರಗೆ ಹೋಗುವಂತೆ ಒತ್ತಾಯಿಸಲಾಗ್ತಾ ಇತ್ತಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ, ಓಡಿ ಹೋಗಲು ಪ್ರಯತ್ನಿಸಿದಾಗ ಕಾಲಿಗೆ ಇಂಜೆಕ್ಷನ್ ನೀಡಿ ಕಾಲು ಶಕ್ತಿ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಜೊತೆಗೆ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ.

ರಾಜ್ಯ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದ ಸಹಾಯದಿಂದ ಹಫೀಜಾ ಭಾರತಕ್ಕೆ ವಾಪಸ್ ಆಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಏಜೆಂಟರ್ ಗಳನ್ನು ಬಂಧಿಸಿದ್ದಾರೆ. ಫಾತಿಮಾ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸೌದಿಯಲ್ಲಿರುವ ಎಷ್ಟೋ ಭಾರತೀಯ ಮಹಿಳೆಯರು ನರಕ ಅನುಭವಿಸುತ್ತಿದ್ದಾರೆಂದು ಈ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...