alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಗೆ ಕಿರುಕುಳ ನೀಡಿ ವಿಡಿಯೋ ಮಾಡಿದ್ರು ಕಿರಾತಕರು

ಬಿಹಾರದ ಸಹರ್ಸಾದಲ್ಲಿ ಸೋಮವಾರ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಏಳು ಮಂದಿ ಹುಡುಗ್ರು ಹುಡುಗಿಗೆ ಕಿರುಕುಳ ನೀಡ್ತಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಇಂದು ಬೆಳಗಿನ ಜಾವ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಪಂಕಜ್ ಪ್ರಕಾರ, ಒಂದು ತಿಂಗಳ ಹಿಂದೆ ಈ ಘಟನೆ ನಡೆದಿತ್ತಂತೆ. ಈಗ ವಿಡಿಯೋ ವೈರಲ್ ಆಗಿದೆ. 7 ಮಂದಿ ಹುಡುಗರ ಮಧ್ಯೆ ಸಿಕ್ಕಿಬಿದ್ದಿರುವ ಹುಡುಗಿ ತನ್ನನ್ನು ಬಿಡುವಂತೆ ಗೋಗರೆಯುತ್ತಿದ್ದಾಳೆ. ಆದ್ರೆ ಹುಡುಗ್ರು ಮಾತ್ರ ತಮ್ಮ ಕೆಲಸ ಮುಂದುವರೆಸಿದ್ದಾರೆ. ಪಂಕಜ್ ಇದನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾನೆ.

ಪಂಕಜ್ ಬಂಧನದ ನಂತ್ರ ಉಳಿದವರ ಪತ್ತೆ ಸುಲಭವೆಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಅನೇಕ ಕಡೆ ದಾಳಿ ನಡೆದಿದೆ. ಬಿಹಾರದಲ್ಲಿ ದಿನ ದಿನಕ್ಕೂ ಕಿರುಕುಳ, ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದ್ದು, ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...