alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಬರ್ ಅಶ್ಲೀಲ ಪ್ರಕರಣದಲ್ಲಿ RTI ಪ್ರಚಾರಕನಿಗೆ ಶಿಕ್ಷೆ

wb-ingd

ಭುವನೇಶ್ವರ್: ಪುರಿಯಲ್ಲಿ ನಡೆದ ಸೈಬರ್ ಅಶ್ಲೀಲ ಪ್ರಕರಣವೊಂದರಲ್ಲಿ ಆರ್.ಟಿ.ಐ. ಪ್ರಚಾರಕನಿಗೆ 6 ವರ್ಷ ಜೈಲು ಶಿಕ್ಷೆ 9000 ರೂ. ದಂಡ ವಿಧಿಸಲಾಗಿದೆ.

ಸೈಬರ್ ಅಶ್ಲೀಲತೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮೊದಲ ಆರೋಪಿ ಜಯಂತ್ ಕುಮಾರ್ ದಾಸ್ ಆಗಿದ್ದಾನೆ. ಜಯಂತ್ ಕುಮಾರ್ ದಾಸ್ ಹಗರಣಗಳನ್ನು ಪತ್ರಕರ್ತರೊಬ್ಬರು ಬಯಲಿಗೆಳೆದಿದ್ದರು. ಪತ್ರಕರ್ತನ ವಿರುದ್ಧ ಸೇಡು ತೀರಿಸಿಕೊಳ್ಳಲು ಜಯಂತ್ ಮುಂದಾಗಿದ್ದಾನೆ.

2012 ರಲ್ಲಿ ಪತ್ರಕರ್ತನ ಪತ್ನಿಯ ಹೆಸರಲ್ಲಿ ನಕಲಿ ಇ ಮೇಲ್ ಖಾತೆ ತೆರೆದು, ಅದನ್ನು ಪೋರ್ನ್ ಸೈಟ್ ಗೆ ಲಿಂಕ್ ಮಾಡಿದ್ದಾನೆ. ಜೊತೆಗೆ ಫೋನ್ ನಂಬರ್ ಕೂಡ ನೀಡಿದ್ದಾನೆ.

ಪತ್ರಕರ್ತನ ಪತ್ನಿಗೆ ಅಪರಿಚಿತರಿಂದ ಕರೆಗಳು, ಅಶ್ಲೀಲ ಸಂದೇಶಗಳು ಬರತೊಡಗಿವೆ. ಇದರಿಂದ ನೊಂದ ಪತ್ರಕರ್ತ 2012 ರ ಜುಲೈನಲ್ಲಿ ಪುರಿಯ ಬಸೇಲಿಸಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಅಪರಾಧ ವಿಭಾಗದ ಸೈಬರ್ ಸೆಲ್ ಗೆ ವರ್ಗಾಯಿಸಲಾಗಿದೆ. ಸೆಪ್ಟಂಬರ್ 18, 2012 ರಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

ವಿವಿಧ ಪ್ರಕರಣಗಳಡಿ ಪ್ರಕರಣ ದಾಖಲಿಸಿ ಪುರಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಕೋಲ್ಕತ್ತಾದ ವಿಧಿ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳು ಸೇರಿದಂತೆ 13 ಮಂದಿ ಪ್ರಮುಖ ಸಾಕ್ಷಿಗಳನ್ನು ಹಾಜರುಪಡಿಸಲಾಗಿತ್ತು.

ಪ್ರಕರಣದ ವಿಚಾರಣೆ ಬಳಿಕ ಕೋರ್ಟ್, ಆರೋಪಿ ಜಯಂತ್ ಗೆ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಸೈಬರ್ ಅಶ್ಲೀಲತೆ ಪ್ರಕರಣದಲ್ಲಿ ಮೊದಲ ಬಾರಿಗೆ ಶಿಕ್ಷೆಗೆ ಗುರಿಪಡಿಸಿದ ಪ್ರಕರಣ ಇದಾಗಿದೆ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರು. ಶಿಕ್ಷೆಗೊಳಗಾದವ ಇನ್ನೂ ಹಲವು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತನಿಖೆ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...