alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ತವ್ಯಕ್ಕೆ ಹಾಜರಾದ ದಿನವೇ ಗುಂಡಿಗೆ ಬಲಿಯಾದ ಮಹಿಳಾ ಪೊಲೀಸ್

ashley-guidon_3584653b

ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದ ಯುವತಿಯೊಬ್ಬಳು ತನ್ನ ಕನಸು ಸಾಕಾರಗೊಂಡ ಮೊದಲ ದಿನವೇ ದುಷ್ಕರ್ಮಿಯ ಗುಂಡಿಗೆ ಬಲಿಯಾಗಿರುವ ದುರಂತ ಘಟನೆ ಅಮೆರಿಕಾದ ವರ್ಜಿನಿಯಾದಲ್ಲಿ ನಡೆದಿದೆ.

ಆಶ್ಲಿ ಗಿಂಡನ್ ಎಂಬ ಈ ಯುವತಿ ಶುಕ್ರವಾರದಂದು ಕರ್ತವ್ಯಕ್ಕೆ ಸೇರಿಕೊಂಡಿದ್ದಳು. ಇಲಾಖೆಯ ಟ್ವಿಟ್ಟರ್ ಪೇಜ್ ನಲ್ಲಿ “Welcome Officers Steven Kendall & Ashley Guindon who were sworn in today & begin their shifts this weekend. Be Safe!” ಎಂದೂ ಟ್ವೀಟ್ ಮಾಡಲಾಗಿತ್ತು.

ಆಕೆ ಕರ್ತವ್ಯಕ್ಕೆ ಹಾಜರಾದ ಕೆಲ ಹೊತ್ತಿನಲ್ಲೇ ತನ್ನ ಗಂಡನಿಂದ ತೊಂದರೆಗೀಡಾದ ಮಹಿಳೆಯೊಬ್ಬಳು ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿದ್ದಾಳೆ. ತಕ್ಷಣವೇ ಆಶ್ಲಿ ಗಿಂಡನ್ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ಜೊತೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಮಹಿಳೆಯ ಪತಿ ಇವರತ್ತ ಗುಂಡು ಹಾರಿಸಿದ್ದು, ಆಶ್ಲಿ ಗಿಂಡನ್ ಸ್ಥಳದಲ್ಲೇ ಸಾವಿಗೀಡಾದರೆ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...