alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರದ ನಂತ್ರ ಖಾಸಗಿ ಅಂಗಕ್ಕೆ ಶಸ್ತ್ರಾಸ್ತ್ರದಿಂದ ಇರಿದ್ರು

girl

ಹರ್ಯಾಣದ ರೋಹ್ಟಕ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 7 ಮಂದಿ ಕಾಮುಕರು ಈ ಕೃತ್ಯವೆಸಗಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ರೋಹ್ಟಕ್ ಪೊಲೀಸ್ ಪ್ರಕಾರ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಮಹಿಳೆ ಖಾಸಗಿ ಅಂಗಕ್ಕೆ ಶಸ್ತ್ರಾಸ್ತ್ರಗಳಿಂದ ಇರಿದಿದ್ದಾರೆ. ನಂತ್ರ ಮಹಿಳೆ ಮೇಲೆ ಗಾಡಿ ಚಲಾಯಿಸಿ ಗುರುತು ಸಿಗದಂತೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಮೇ 9ರಂದು ನಡೆದಿದೆ. ರೋಹ್ಟಕ್ ನ ಐಎಂಟಿ ಬಳಿ ಅಪರಿಚಿತ ಮಹಿಳೆಯ ಶವ ಸಿಕ್ಕಿದೆ. ಶವವನ್ನು ನಾಯಿ ಕಿತ್ತು ತಿನ್ನುತ್ತಿತ್ತು ಎನ್ನಲಾಗಿದೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶವವನ್ನು ವಶಕ್ಕೆ ಪಡೆದ ಪೊಲೀಸರು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆ ಕೆಲಸಕ್ಕೆ ಹೊರಟಿದ್ದ ವೇಳೆ ಮಹಿಳೆಯನ್ನು ಅಪಹರಿಸಿದ 7 ಮಂದಿ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಆಕೆ ಮೈಮೇಲೆ ಸಾಕಷ್ಟು ಗಾಯಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...