alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ-ಮಗನಿಗೆ ಹೊಡೆದು ಪಕ್ಕದ ಮನೆಯವನನ್ನು ಕೊಂದ

ಪತ್ನಿ ಹಾಗೂ ಮಗನಿಗೆ ರಸ್ತೆ ಮಧ್ಯೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿಯೊಬ್ಬ ನಂತ್ರ ಊರಿನ ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ. ಘಟನೆ ಹರ್ಯಾಣದ ರೋಹ್ಟಕ್ ನ ಶಿವಾಜಿ ಕಾಲೋನಿಯಲ್ಲಿ ನಡೆದಿದೆ. ಭಾನುವಾರ ಸಂಜೆ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುವ ಶಾಂತಲಾಲ್ ಎಂಬಾತನನ್ನು ರಮಣ್ ಹೊಡೆದು ಸಾಯಿಸಿದ್ದಾನೆ.

ಭಾನುವಾರ ರಮಣ್ ನ ಎರಡು ವರ್ಷದ ಮಗ ಮನೆ ಮುಂದೆ ಆಡುತ್ತಿದ್ದನಂತೆ. ಈ ವೇಳೆ ಮನೆಗೆ ಬಂದ ರಮಣ್ ಮಗನಿಗೆ ಒಳಗೆ ಹೋಗಲು ಹೇಳಿದ್ದಾನೆ. ಮಗ ಒಳಗೆ ಹೋಗದ್ದನ್ನು ನೋಡಿ ಕೋಪಗೊಂಡ ರಮಣ್ ಮಗನಿಗೆ ಹೊಡೆದಿದ್ದಾನೆ. ಮಧ್ಯೆ ಬಂದ ಪತ್ನಿಗೂ ಹೊಡೆದಿದ್ದಾನೆ. ಗಲಾಟೆ ಜೋರಾಗಿದೆ.

ರಮಣ್ ರಾಡ್ ಹಿಡಿದು ಹೊಡೆಯಲು ಶುರು ಮಾಡಿದ್ದಾನೆ. ಪತ್ನಿ, ಮಗುವಿನೊಂದಿಗೆ ಓಡಿದ್ದಾಳೆ. ಇದನ್ನು ನೋಡಿದ ಶಾಂತಲಾಲ್ ರಕ್ಷಣೆಗೆ ಮುಂದಾಗಿದ್ದಾನೆ. ಆದ್ರೆ ಕೋಪದಲ್ಲಿದ್ದ ರಮಣ್ ಶಾಂತಲಾಲ್ ಗೆ ಹೊಡೆದು ಕೊಲೆ ಮಾಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...