alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಂಡತಿ ನಡವಳಿಕೆಗೆ ಬೇಸತ್ತು ಇಂಥ ಕೆಲಸ ಮಾಡಿದ ಮಾಜಿ ಸೈನಿಕ

ಅಂಬಾಲದಲ್ಲಿ ಮಾಜಿ ಸೈನಿಕನೊಬ್ಬ ಎಲ್ಲರೆದುರೇ ಪತ್ನಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಮಾಜಿ ಯೋಧ ತನ್ನ ಹೆಂಡತಿ ನಡವಳಿಕೆಗೆ ಬೇಸತ್ತು ಹತ್ಯೆ ಮಾಡಿದ್ದಾನೆ.

ಪತ್ನಿ ನಡವಳಿಕೆ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಎನ್ನಲಾಗಿದೆ. ಆದ್ರೆ ತನ್ನ ಮೇಲೆ ಬಂದ ಆರೋಪವನ್ನು ಪತ್ನಿ ನಿರಾಕರಿಸಿದ್ದಾಳೆ. ಇದ್ರಿಂದ ಕೋಪಗೊಂಡ ಮಾಜಿ ಸೈನಿಕ ಪತ್ನಿಗೆ 2 ಗುಂಡು ಹಾರಿಸಿದ್ದಾನೆ.ಮಾಜಿ ಸೈನಿಕ ವಿಕ್ರಮ್ ಪತ್ನಿ ಗುರ್ಮಿತ್ ಳನ್ನು ಹತ್ಯೆ ಮಾಡಿದ್ದಾನೆ. ಸ್ಥಳದಲ್ಲಿಯೇ ಪತ್ನಿ ಗುರ್ಮಿತ್ ಕೊನೆಯುಸಿರೆಳೆದಿದ್ದಾಳೆ.

ಗುಂಡಿನ ಶಬ್ಧ ಕೇಳಿ ಪೊಲೀಸ್ ಚೌಕಿಯಲ್ಲಿದ್ದ ಪೊಲೀಸರು ಓಡಿ ಬಂದಿದ್ದಾರೆ. ಆರೋಪಿ ವಿಕ್ರಮ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುರ್ಮಿತ್ ಕಳೆದ ಕೆಲ ದಿನಗಳಿಂದ ಮಹಿಳೆಯೊಬ್ಬಳ ಮನೆಯಲ್ಲಿದ್ದಳು ಎನ್ನಲಾಗಿದೆ. ವಿಕ್ರಮ್ ಪತ್ನಿ ಕಾಲಿಗೆ ಬಿದ್ದು ಮನೆಗೆ ವಾಪಸ್ ಬರುವಂತೆ ಕೇಳಿದ್ದನಂತೆ. ಆದ್ರೆ ಪತ್ನಿ ಇದಕ್ಕೆ ಒಪ್ಪಿರಲಿಲ್ಲವಂತೆ.

ಸೇನೆಯಿಂದ ನಿವೃತ್ತಿಯಾಗಿರುವ ವಿಕ್ರಮ್ ಸದ್ಯ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...