alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ಹುಡುಗಿಯರಿಂದ ದೂರವಿರಿ….

ಅಶ್ಲೀಲ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡ್ತಿದ್ದ ಗ್ಯಾಂಗ್ ಒಂದು ಚತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ಪೊಲೀಸ್ ಬಲೆಗೆ ಬಿದ್ದಿದೆ. ಈ ಗ್ಯಾಂಗ್ ನಲ್ಲಿ ಹುಡುಗಿಯರು ಶಾಮೀಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯರ ಸಹಾಯದಿಂದ ದುಷ್ಕರ್ಮಿಗಳು ಅಶ್ಲೀಲ ವಿಡಿಯೋ ಮಾಡಿ ನಂತ್ರ ಬ್ಲಾಕ್ಮೇಲ್ ಮಾಡ್ತಿದ್ದರು.

ಮಾಹಿತಿ ಪ್ರಕಾರ ಮೂವರು ಮಹಿಳೆಯರು ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 19ರಂದು ಮೊಹಮ್ಮದ್ ಖಲೀಲ್ ಎಂಬಾತನಿಗೆ ಮಹಿಳೆಯೊಬ್ಬಳು ಕರೆ ಮಾಡಿದ್ದಾಳೆ. ಪ್ರೀತಿ, ಮೋಹದ ಮಾತುಗಳನ್ನಾಡಿ ಖಲೀಲ್ ನನ್ನು ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದಾಳಂತೆ. ಮರುದಿನ ತನ್ನ ಮನೆಗೆ ಬರುವಂತೆ ಕರೆದಿದ್ದಾಳೆ.

ಆಕೆ ಮನೆಯಲ್ಲಿ ಇಬ್ಬರು ಹುಡುಗರಿದ್ದರು ಎಂದು ಮೊಹಮ್ಮದ್ ತಿಳಿಸಿದ್ದಾನೆ. ಮನೆಗೆ ಹೋಗ್ತಿದ್ದಂತೆ ಹೊರಗಿನಿಂದ ಬಾಗಿಲು ಹಾಕಿಕೊಂಡ ಯುವಕರು, ಹುಡುಗಿ ಜೊತೆ ಮೊಹಮ್ಮದ್ ಕಳೆದ ಕ್ಷಣವನ್ನು ವಿಡಿಯೋ ಮಾಡಿದ್ದಾರೆ. ನಂತ್ರ ಅಶ್ಲೀಲ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾರೆ.

3 ಲಕ್ಷ ಕೇಳಿದ್ದ ಆರೋಪಿಗಳು ನಂತ್ರ 2.3 ಲಕ್ಷಕ್ಕೆ ಒಪ್ಪಿಕೊಂಡಿದ್ದಾರೆ. ನಂತ್ರ 60 ಸಾವಿರ ರೂಪಾಯಿ ಕೇಳಿದ್ದಾರೆ. ಮರುದಿನ ಮತ್ತೆ ಮೊಹಮ್ಮದ್ ನನ್ನು ಫಾಲೋ ಮಾಡಿದ್ದಾರೆ. ಇದ್ರಿಂದ ಬೇಸತ್ತ ಮೊಹಮ್ಮದ್ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಜೈಲಿನ ಹಾದಿ ತೋರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...