alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನ ಮಾಡಲೂ ಬಾಡಿಗೆಗೆ ಸಿಕ್ತಾರೆ ಮಕ್ಕಳು..!

robbery

ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿರೋ ಕದಿಯಾ ಎಂಬ ಗ್ರಾಮ ಇದು. ಈ ಗ್ರಾಮದ ಮಹಿಳೆಯರ ಮೈತುಂಬಾ ಆಭರಣವಿದೆ, ಪ್ರತಿ ಪುರುಷರ ಬಳಿಯೂ ಹೊಚ್ಚ ಹೊಸ ಬೈಕ್, ಮಕ್ಕಳ ಕೈಯಲ್ಲಿ ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಗಳು. ಈ ಹಳ್ಳಿಯಲ್ಲಿರೋ ಮನೆಗಳು ಕೂಡ ಅತ್ಯಾಧುನಿಕವಾಗಿವೆ.

ಆದ್ರೆ ಪೀಠೋಕರಣಗಳಿಲ್ಲ. ಅಷ್ಟಕ್ಕೂ ಇವರು ಮಾಡೋ ಉದ್ಯೋಗದ ಬಗ್ಗೆ ಕೇಳಿದ್ರೆ ಎಂಥವರು ಕೂಡ ಬೆಚ್ಚಿ ಬೀಳ್ತಾರೆ. ತಮ್ಮ ಮಕ್ಕಳನ್ನು ಕಳ್ಳರ ಗ್ಯಾಂಗ್ ಗೆ ಇವರು ಬಾಡಿಗೆಗೆ ಕೊಡ್ತಾರೆ. ದೆಹಲಿಯಂತಹ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ನಡೆಯೋ ಅದ್ಧೂರಿ ಮದುವೆಗಳಲ್ಲಿ ಕಳ್ಳತನ ಮಾಡುವ ನಟೋರಿಯಸ್ ಗ್ಯಾಂಗ್ ಅದು.

ಮಕ್ಕಳನ್ನು ಗ್ಯಾಂಗ್ ಕೈಗೆ ಒಪ್ಪಿಸಿ ಹೆತ್ತವರು ವರ್ಷಕ್ಕೆ 2-5 ಲಕ್ಷ ರೂಪಾಯಿ ಪಡೆಯುತ್ತಾರೆ. ಕಳೆದ 4 ತಿಂಗಳುಗಳಲ್ಲಿ ಒಟ್ಟು 84 ಪೊಲೀಸ್ ತಂಡಗಳು ಪಚೋರ್ ಗೆ ಭೇಟಿ ಕೊಟ್ಟಿವೆ. ಮಕ್ಕಳನ್ನು ಬಾಡಿಗೆಗೆ ಪಡೆಯೋ ಕಳ್ಳರ ಗ್ಯಾಂಗ್ ಪತ್ತೆ ಮಾಡಲು ಕಸರತ್ತು ನಡೆಸಿವೆ. ಜುಲೈ 3ರಂದು ದೆಹಲಿಯಲ್ಲಿ ನಡೆದ ಅದ್ಧೂರಿ ಮದುವೆಯೊಂದರಲ್ಲಿ 8 ಲಕ್ಷ ನಗದು ತುಂಬಿದ್ದ ಬ್ಯಾಗ್ ಒಂದನ್ನು ಪುಟ್ಟ ಮಗು ಕಳವು ಮಾಡಿರೋದು ಬೆಳಕಿಗೆ ಬಂದಿದೆ.

sansi-tribe-story_4b6940ca-66b9-11e7-95fb-ec6334583ea6

ಕಳೆದ 3 ತಿಂಗಳಲ್ಲಿ ಈ ಕಳ್ಳರ ಗ್ಯಾಂಗ್ ನಲ್ಲಿ ತರಬೇತಿ ಪಡೆಯಲು 11 ಮಕ್ಕಳು ಊರು ಬಿಟ್ಟಿದ್ದಾರೆ. ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ 7 ಮತ್ತು 12 ವರ್ಷದ ಇಬ್ಬರು ಮಕ್ಕಳು 30 ಲಕ್ಷ ಬೆಲೆಬಾಳುವ ಆಭರಣ ಕದ್ದಿದ್ರು. ಈ ಪುಟಾಣಿ ಕಳ್ಳರನ್ನು 2 ಲಕ್ಷ ಕೊಡೋದಾಗಿ ಒಪ್ಪಂದ ಮಾಡಿಕೊಂಡು ಕರೆತರಲಾಗಿತ್ತು.

ಇನ್ನು ಕೆಲವರು ನಕಲಿ ದಾಖಲೆ ತಯಾರಿಸಿ ಮಕ್ಕಳನ್ನು ದತ್ತು ಪಡೆದಂತೆ ನಾಟಕವಾಡಿ, ನಂತರ ಅವರನ್ನು ಕಳ್ಳರ ಗ್ಯಾಂಗ್ ಗೆ ಸೇರಿಸುತ್ತಿದ್ದಾರೆ. ಪ್ರತಿ ಬಾರಿ 20 ಲಕ್ಷ ಹಣ ಮಾಡಿಕೊಂಡು ಈ ಊರಿಗೆ ಬರೋ ಗ್ಯಾಂಗ್, ಇಲ್ಲಿಂದ ಮತ್ತಷ್ಟು ಮಕ್ಕಳನ್ನು ನೇಮಕ ಮಾಡಿಕೊಂಡು ಮತ್ತೊಂದು ಸ್ಕೆಚ್ ಹಾಕಿ ಹೊರಟುಬಿಡುತ್ತದೆ.

ಶ್ರೀಮಂತರಿಂದ ಹಣ ದೋಚುವುದರಲ್ಲಿ ತಪ್ಪೇನೂ ಇಲ್ಲ ಅನ್ನೋದು ಈ ಗ್ರಾಮಸ್ಥರ ಅಭಿಪ್ರಾಯ. ಪ್ರತಿಬಾರಿ ಅರೆಸ್ಟ್ ವಾರೆಂಟ್ ಜಾರಿಯಾದಾಗ್ಲೂ ಪೊಲೀಸರೇ ಇಲ್ಲಿ ಮಧ್ಯವರ್ತಿಯಂತೆ ವರ್ತಿಸ್ತಾರೆ. ಗ್ರಾಮದ ಸರಪಂಚರಿಗೆ ಮಾಹಿತಿ ನೀಡ್ತಾರೆ. ಆ ಹೆಸರಿನವರು ಊರಲ್ಲಿ ಇಲ್ವೇ ಇಲ್ಲ ಎಂದುಬಿಡ್ತಾರೆ ಸರಪಂಚರು. ಹೀಗೆ ಕೇಸ್ ಕ್ಲೋಸ್ ಆಗಿ ಹೋಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...