alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರವೆಸಗಿದ ಕ್ಲಿನಿಕ್ ಮಾಲೀಕ

ಘಾಜಿಯಾಬಾದ್ ನಲ್ಲಿ ಕ್ಲಿನಿಕ್ ಮಾಲೀಕನೊಬ್ಬ ಅಪ್ರಾಪ್ತ ಹುಡುಗಿಗೆ ನಶೆ ಬರುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದಾನೆ. ಮದ್ಯಪಾನಿ ತಂದೆ ಜೀವ ತೆಗೆಯುವುದಾಗಿ ಬೆದರಿಸಿ ಆಕೆ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದ್ರೆ ಆರೋಪಿಯನ್ನು ಪೊಲೀಸರು ಈವರೆಗೂ ಬಂಧಿಸಿಲ್ಲ.

POCSO ಕಾಯಿದೆಯಡಿ ಆರೋಪಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತ ಪೀಡಿತೆ ತಂದೆಯ ಮದ್ಯಪಾನ ಚಟ ಬಿಡಿಸಲು ಕ್ಲಿನಿಕ್ ಗೆ ಬರ್ತಿದ್ದಳು ಎನ್ನಲಾಗಿದೆ. ಆರ್ಥಿಕ ಸಮಸ್ಯೆ ಜೊತೆಗೆ ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಬಾಲಕಿ ಮಾನಸಿಕವಾಗಿಯೂ ಕುಸಿದು ಹೋಗಿದ್ದಾಳೆ.

12ನೇ ತರಗತಿ ಓದುತ್ತಿರುವ ಹುಡುಗಿ ತಂದೆ ಮದ್ಯಪಾನ ಮಾಡ್ತಿದ್ದ. ಈ ಕೆಟ್ಟ ಚಟ ಬಿಡಿಸಲು ಹುಡುಗಿ ಕುಟುಂಬದವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಕೊನೆಯಲ್ಲಿ ಘಾಜಿಯಾಬಾದ್ ಹ್ಯಾಪಿ ಹೋಮ್ ಸೆಂಟರ್ ಬಗ್ಗೆ ಗೊತ್ತಾಗಿದೆ. ಆನ್ಲೈನ್ ನಲ್ಲಿ ಹೆಸರು ದಾಖಲಿಸಿದ್ದಾರೆ.

ಹೆಸರು ದಾಖಲಿಸಿ ಮೂರನೇ ದಿನಕ್ಕೆ ಕ್ಲಿನಿಕ್ ಓನರ್ ಕರೆ ಮಾಡಿದ್ದಾನೆ. ತಂದೆಗೆ ಮಾನಸಿಕ ತೊಂದರೆಯಿದೆ ಎಂದಿದ್ದಾನೆ. ಮನೆಯಲ್ಲಿ ತಾಯಿಯಿಲ್ಲ. ಹಾಗಾಗಿ ಕ್ಲಿನಿಕ್ ಗೆ ಬರೋದು ಕಷ್ಟ ಎಂದಿದ್ದಾಳೆ ಹುಡುಗಿ. ಘಾಜಿಯಾಬಾದ್ ಗೆ ಹುಡುಗಿ ಬರಬೇಕಾಗಿಲ್ಲ, ಮಣಿಪಾಲ್ಪುರದ ಹೊಟೇಲ್ ಒಂದಕ್ಕೆ ಮನಃಶಾಸ್ತ್ರಜ್ಞ ಬಂದಿದ್ದು ಆತನನ್ನು ಸಂಪರ್ಕಿಸುವಂತೆ ಹೇಳಲಾಗಿದೆ.

ಅಲ್ಲಿ ಹೋದಾಗ ಕೋಲ್ಡ್ ಡ್ರಿಂಕ್ ನೀಡಲಾಗಿದ್ದು, ಅದ್ರಲ್ಲಿ ನಶೆಯ ಪದಾರ್ಥ ನೀಡಲಾಗಿತ್ತು. ಬೆಳಿಗ್ಗೆ ಎದ್ದು ನೋಡಿದಾಗ ಬೆತ್ತಲಾಗಿ ನಾನು ಬಿದ್ದಿದ್ದೆ. ಪಕ್ಕದಲ್ಲಿ ಕ್ಲಿನಿಕ್ ಮಾಲೀಕನಿದ್ದ ಎಂದು ಹುಡುಗಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...