alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ಕ್ರೂರ ಅತ್ಯಾಚಾರಿ

eric

ಈ ಅಪರಾಧಿಗೆ ಎಂತ ಕಠಿಣ ಶಿಕ್ಷೆ ನೀಡಿದ್ರೂ ಕಡಿಮೆಯೆ. ಯಾಕೆಂದ್ರೆ ಆತ ಮಾಡಿದ ತಪ್ಪೇ ಅಂತಹದ್ದು. ಆತನ ಹೆಸರು ಎರಿಕ್ ಡೆವಿನ್. ಮಾಜಿ ಕೋಸ್ಟ್ ಗಾರ್ಡ್. ಆತ 18 ತಿಂಗಳ ಮಗುವಿನ ಮೇಲೆರಗಿದ್ದಾನೆ. ಇಷ್ಟೇ ಅಲ್ಲ ತನ್ನ ಹೀನ ಕೃತ್ಯವನ್ನು ವಿಡಿಯೋ ಮಾಡಿದ್ದಾನೆ.

29 ವರ್ಷದ ಈ ಕಾಮುಕನಿಗೆ ವಿಚಿಗನ್ ನ್ಯಾಯಾಲಯ 200 ವರ್ಷಗಳ ಜೈಲು ಶಿಕ್ಷೆವಿಧಿಸಿದೆ. ತೀರ್ಪಿನ ವೇಳೆ ಎರಿಕ್ ನಿಜವಾಗಲೂ ದೆವ್ವ ಎಂದು ಜಡ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂತ ಕಾಮುಕರಿಗೆ ತಕ್ಕ ಶಿಕ್ಷೆಯಾದ್ರೆ ಮಾತ್ರ ಮುಂದೆ ಜನ ಎಚ್ಚೆತ್ತುಕೊಳ್ಳುತ್ತಾರೆಂದು ಅವರು ಹೇಳಿದ್ದಾರೆ. ತಮ್ಮ 31 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ವಿದ್ವಂಸಕ ಕೃತ್ಯಗಳ ಬಗ್ಗೆ ತೀರ್ಪಿತ್ತಿದ್ದೇನೆ. ಆದ್ರೆ ಇಂತ ಕ್ರಿಮಿನಲ್ ಕೇಸ್ ಇದೇ ಮೊದಲು ಎಂದಿದ್ದಾರೆ ಎರಿಕ್.

18 ತಿಂಗಳ ಮಗುವನ್ನು ಎತ್ತಿಕೊಂಡು ಹೋದ ಎರಿಕ್ ನಂತ್ರ ಆಕೆಯ ಕೈ,ಕಾಲುಗಳನ್ನು ಕಟ್ಟಿ ಹಾಕಿ ರೇಪ್ ಮಾಡಿದ್ದಾನೆ. ಕಳೆದ ತಿಂಗಳು ಮೂರು ಹುಡುಗಿಯರ ಮೇಲೆರಗಿದ ಆರೋಪದಡಿಯಲ್ಲಿ ಎರಿಕ್ ಗೆ 50 ವರ್ಷಗಳ ಶಿಕ್ಷೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...