alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹರಣಕ್ಕೊಳಗಾಗಿದ್ದ ಬಾಲಕಿ ಈಗ 3 ವಾರಗಳ ಗರ್ಭಿಣಿ

women-in-dark-room

ದೆಹಲಿಯಲ್ಲಿ ಮೇ 6ರಂದು ಐಸ್ ಕ್ರೀಂ ತರಲು ಮನೆಯಿಂದ ಹೊರಹೋಗಿದ್ದ 13 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, 8ನೇ ತರಗತಿಯ ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ.

ಬಾಲಕಿ ಮನೆಯ ಅಕ್ಕಪಕ್ಕದಲ್ಲೇ ವಾಸವಾಗಿದ್ದ 12-15 ಯುವಕರು ಒಟ್ಟಾಗಿ ಅವಳನ್ನು ಅಪಹರಿಸಿದ್ದರಂತೆ. ಎಲ್ಲರೂ ರೆಸ್ಟೋರೆಂಟ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ರು. ಪೊಲೀಸರು ತನಿಖೆ ಶುರು ಮಾಡ್ತಿದ್ದಂತೆ ತಲೆಮರೆಸಿಕೊಂಡಿದ್ರು. ಎಷ್ಟು ಹುಡುಕಿದ್ರೂ ಪೊಲೀಸರಿಗೆ ಕಾಮುಕರ ಸುಳಿವು ಸಿಕ್ಕಿರಲಿಲ್ಲ.

ಕೊನೆಗೆ ಬಾಲಕಿಯ ತಂದೆ ಕೋರ್ಟ್ ಮೊರೆಹೋಗಿದ್ದರು. ಕಳೆದ ವಾರ ಓರ್ವ ಆರೋಪಿ ಕೋರ್ಟ್ ಮುಂದೆ ಹಾಜರಾಗಿದ್ದ. ಜೊತೆಗೆ ಬಾಲಕಿಯನ್ನೂ ಕರೆತಂದಿದ್ದ. ಅವಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 3 ವಾರಗಳ ಗರ್ಭಿಣಿ ಅನ್ನೋದು ಬೆಳಕಿಗೆ ಬಂದಿದೆ.

ಸದ್ಯ ಉಳಿದ ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಗಾಗಿ 45,000 ರೂಪಾಯಿ ಖರ್ಚಾಗಿದೆ ಅಂತಾ ಬಾಲಕಿ ತಂದೆ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಸರ್ಚ್ ಆಪರೇಷನ್ ಸಂದರ್ಭದಲ್ಲಿ ಪೊಲೀಸರು ಎಲ್ಲಾ ಖರ್ಚನ್ನು ತಮ್ಮ ಮೇಲೆ ಹೊರಿಸಿದ್ದರು ಅಂತಾ ಆರೋಪ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...