alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದ ವಿದ್ಯಾರ್ಥಿನಿ ಬ್ಯಾಗ್ ನಲ್ಲಿದ್ದ ಡೆತ್ ನೋಟ್ ನೋಡಿ ದಂಗಾದ ಪೊಲೀಸ್

ಹತ್ತು ವರ್ಷದ ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಸಿಕ್ಕ ಡೆತ್ ನೋಟ್ ಒಂದು ಎಲ್ಲರನ್ನು ದಂಗಾಗಿಸಿದೆ. ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಸಿಕ್ಕ ಡೆತ್ ನೋಟ್ ಆಧಾರದ ಮೇಲೆ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಚಂಡೀಗಢ ರೋಹ್ಟಕ್ ನಲ್ಲಿ 10 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಬ್ಯಾಗ್ ನಲ್ಲಿ ಡೆತ್ ನೋಟ್ ಇಟ್ಟಿದ್ದಳು. ಅದ್ರಲ್ಲಿ ತನ್ನ ಮೇಲಾಗುತ್ತಿರುವ ನಿರಂತರ ಅತ್ಯಾಚಾರದ ಬಗ್ಗೆ ಬರೆದಿದ್ದಾಳೆ. ಮನೆ ಮಾಲೀಕ ತಂದೆ-ತಾಯಿಗೆ ಹಿಂಸೆ ನೀಡುವುದಾಗಿ ಬೆದರಿಸಿ ನಿರಂತರ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ ಭಯಗೊಂಡಿರುವ ಕಾರಣ ಹೆಚ್ಚಿನ ವಿಚಾರಣೆ ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಮಗಳು ಆಗಾಗ ಮಾಲೀಕನ ಮನೆಗೆ ಆಡಲು ಹೋಗ್ತಿದ್ದಳಂತೆ. ಈ ಸಮಯವನ್ನು ಮಾಲೀಕ ದುರುಪಯೋಗಪಡಿಸಿಕೊಂಡಿದ್ದಾನೆ. ಮಗಳಿಗೆ ಓದಿಸಲು ಬ್ಯಾಗ್ ತೆಗೆದಾಗ ತಾಯಿಗೆ ಡೆತ್ ನೋಟ್ ಸಿಕ್ಕಿದೆ. ಅದೃಷ್ಟವಶಾತ್ ಬಾಲಕಿ ಯಾವುದೇ ಕೆಟ್ಟ ಕೆಲಸಕ್ಕೆ ಕೈ ಹಾಕಿಲ್ಲ ಎನ್ನುತ್ತಿದ್ದಾರೆ ಪಾಲಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...