alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರದ ವಿಡಿಯೋಕ್ಕೆ ಹೆಚ್ಚಾಯ್ತು ಬೇಡಿಕೆ

ಎಲೆಕ್ಟ್ರಾನಿಕ್ ಸಾಮಗ್ರಿಗಳಿಗೆ ಹೆಸರಾಗಿರುವ ಉತ್ತರ ಪ್ರದೇಶದ ನಾಕಾ ಹಿಂದೊಲದಲ್ಲಿ ಹೊಸ ಬ್ಯುಸಿನೆಸ್ ಶುರುವಾಗಿದೆ. ಗ್ರೇ ಮಾರುಕಟ್ಟೆ ಎಂದು ಕರೆಯಲ್ಪಡುವ ಈ ಮಾರುಕಟ್ಟೆಯಲ್ಲಿ ಅತ್ಯಾಚಾರದ ವಿಡಿಯೋಗಳ ಮಾರಾಟ ಜೋರಾಗಿದೆ. ಲೋಕಲ್ ಫಿಲ್ಮ್ ಹೆಸರಿನಲ್ಲಿ ಅತ್ಯಾಚಾರಿ ವಿಡಿಯೋಗಳನ್ನು ಈ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗ್ತಿದೆ.

ಡೆಕ್ಕನ್ ಕ್ರಾನಿಕಲ್ ವರದಿ ಪ್ರಕಾರ, ಬ್ಲಾಕ್ ಕವರ್ ಅಥವಾ ಪೆನ್ ಡ್ರೈವ್ ಮೂಲಕ ಅತ್ಯಾಚಾರದ ವಿಡಿಯೋವನ್ನು ಸರಬರಾಜು ಮಾಡಲಾಗುತ್ತದೆ. ಪರಿಚಿತ ವ್ಯಕ್ತಿಗಳ ನಡುವೆ ಮಾತ್ರ ಈ ವ್ಯವಹಾರ ನಡೆಯುತ್ತಿದೆ. ಪೊಲೀಸ್ ಠಾಣೆಯಿಂದ 500 ಮೀಟರ್ ದೂರದಲ್ಲಿ ಈ ವ್ಯವಹಾರ ನಡೆಯುತ್ತಿದೆ. ದೊಡ್ಡ ಮೊತ್ತದ ಡೀಲ್ ಗೆ ಪೊಲೀಸರಿಗೂ ಹಣ ನೀಡಲಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ.

ಅತ್ಯಾಚಾರವೆಸಗಿ ಆ ವಿಡಿಯೋ ಮುಂದಿಟ್ಟುಕೊಂಡು ಪೀಡಿತ ಮಹಿಳೆಗೆ ಹಿಂಸೆ ನೀಡುತ್ತಿದ್ದ ಪ್ರಕರಣ ಸಾಕಷ್ಟಿದೆ. ಆದ್ರೀಗ ಅತ್ಯಾಚಾರದ ವಿಡಿಯೋ ದೊಡ್ಡ ಮಟ್ಟದ ಬ್ಯುಸಿನೆಸ್ ಆಗಿದೆ. ಬ್ಲ್ಯೂ ಫಿಲ್ಮ್ ಕಾಲ ಈಗಿಲ್ಲ. ಈಗ ಅತ್ಯಾಚಾರದ ವಿಡಿಯೋಗಳಿಗೆ ಬೇಡಿಕೆ ಹೆಚ್ಚು ಎಂದು ವಿಡಿಯೋ ಮಾರಾಟ ಮಾಡುವ ವ್ಯಕ್ತಿ ಹೇಳಿದ್ದಾನೆ. 10-30 ನಿಮಿಷದೊಳಗಿರುವ ವಿಡಿಯೋ ಬೆಲೆ 300-500 ರೂಪಾಯಿಯೊಳಗಿರುತ್ತದೆ.

ವಿಡಿಯೋಗಳನ್ನು 2 ಸಾವಿರದಿಂದ 3 ಸಾವಿರಕ್ಕೆ ಖರೀದಿ ಮಾಡ್ತಾರಂತೆ. ನಂತ್ರ ಅದನ್ನು ಕ್ಲೀನ್ ಮಾಡ್ತಾರಂತೆ. ಅಂದ್ರೆ ಅತ್ಯಾಚಾರಿ ಮುಖ ಬ್ಲರ್ ಮಾಡಿ, ಪೀಡಿತೆ ಮುಖವನ್ನು ಹಾಗೆ ಇಡಲಾಗುತ್ತದೆಯಂತೆ. ದಿನಕ್ಕೆ 100-200 ಸಿಡಿ ಮಾರಾಟವಾಗುತ್ತೆ ಎನ್ನುತ್ತಾರೆ ಮಾರಾಟಗಾರ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...