alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯತ ಕಟ್ಟುವುದಾಗಿ ಹೇಳಿ ಹೀನ ಕೃತ್ಯ

rr-rape

ಶಿವಮೊಗ್ಗ: ದೇವಾಲಯಕ್ಕೆ ಬಂದಿದ್ದ ಬಾಲಕಿಗೆ, ತಾಯತ ಕಟ್ಟುವುದಾಗಿ ಹೇಳಿ ಕೊಠಡಿಗೆ ಕರೆದೊಯ್ದ ಪೂಜಾರಿಯೊಬ್ಬ, ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ವಿನೋಬನಗರದಲ್ಲಿರುವ ದೇವಾಲಯದಲ್ಲಿ ಪೂಜೆ ಮಾಡುವ 52 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಈತ ದೇವಾಲಯಕ್ಕೆ ಬಂದಿದ್ದ 15 ವರ್ಷದ ಬಾಲಕಿಗೆ, ನಿನಗೆ ದೋಷವಿದೆ. ತಾಯತ ಕಟ್ಟಿದರೆ, ಸರಿ ಹೋಗುತ್ತದೆ ಎಂದು ನಂಬಿಸಿ, ಕೊಠಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದ್ದಾಳೆ.

ತಾಯಿ, ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಈತ ತಾಯತ ಕಟ್ಟುವುದಾಗಿ ಹಲವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...