alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧವೆ ಮೇಲೆ ಅತ್ಯಾಚಾರವೆಸಗಿ ಕಾಲಿಗೆ ಬಿದ್ದ

rape nmkl 2534

ಒಂಟಿಯಾಗಿ ಕೆಲಸ ಮಾಡುತ್ತಿದ್ದ ವಿಧವೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಳಿಕ ಆಕೆಯ ಕಾಲಿಗೆ ಬಿದ್ದು, ಕ್ಷಮೆ ಕೇಳಿದ್ದಾನೆ.

ಬರೇಲಿ ಜಿಲ್ಲೆಯ ಮೀರ್ ಗಂಜ್ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಸರ್ಕಾರಿ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲಾ ಊಟಕ್ಕೆ ಹೋಗಿದ್ದರು. ಆಗ ಮಹಿಳೆಯೊಬ್ಬರೇ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾಮಗಾರಿ ನಿರ್ವಹಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರೋಹಿತೇಶ್ ಎಂಬಾತ ಬೈಕ್ ನಲ್ಲಿ ಬಂದಿದ್ದಾನೆ. ಮಹಿಳೆ ಒಂಟಿಯಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿ, ಉಳಿದವರು ಎಲ್ಲಿ ಎಂದು ಪ್ರಶ್ನಿಸಿದ್ದಾನೆ. ಅವರು ಊಟಕ್ಕೆ ಹೋಗಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಆಗ ಆಕೆಯನ್ನು ಸಮೀಪದ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ಕಳುಹಿಸಿದ್ದಾನೆ. ಮಹಿಳೆ, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಸ್ವೀಕರಿಸದ ಪೊಲೀಸರು, ಗ್ರಾಮದ ಪಂಚಾಯಿತಿ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯ ಜೊತೆಗೆ ಬಂದ ಪಂಚಾಯಿತಿ ಮುಖಂಡ ಮಹಿಳೆಯ ಕಾಲಿಗೆ ಬೀಳುವಂತೆ ಸೂಚಿಸಿದ್ದಾನೆ. ಆರೋಪಿ ಕಾಲಿಗೆ ಬಿದ್ದ ನಂತರ ಎಲ್ಲಾ ಸರಿಯಾಯ್ತು ಎಂದು ಅಲ್ಲಿಂದ ಹೊರಟಿದ್ದಾರೆ. ಮಹಿಳೆ, ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ ಬಳಿಕ ಸ್ಥಳೀಯ ಪೊಲೀಸರು ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...