alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಕೃತ್ಯಕ್ಕೆ ಗ್ಯಾರಂಟಿ ಹಿಡಿ ಶಾಪ ಹಾಕುತ್ತೀರಿ

miner girl nm24

ಕೆಲವೊಮ್ಮೆ ಅಪ್ರಾಪ್ತರು ಎಷ್ಟೆಲ್ಲಾ ಕೆಟ್ಟ ಕೆಲಸ ಮಾಡುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಇಲ್ಲೊಬ್ಬ ಬಾಲಕ ಮಾಡಿದ ಕೃತ್ಯವನ್ನು ಕೇಳಿದರೆ, ಖಂಡಿತ ಶಪಿಸುತ್ತೀರಿ. ಅಂತಹ ಕೆಲಸವನ್ನು ಮಾಡಿದ್ದಾನೆ ಈ ಅಪ್ರಾಪ್ತ ಬಾಲಕ.

ಅಪ್ರಾಪ್ತ ಬಾಲಕನೊಬ್ಬ 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಘಟನೆ ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಬಾಲಕ, ತನ್ನ ಮನೆಯ ಸಮೀಪದಲ್ಲೇ ಇದ್ದ ಬಾಲಕಿಯನ್ನು, ಆಟವಾಡಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದರಿಂದ 4 ವರ್ಷದ ಬಾಲಕಿ ಬಳಲಿದ್ದು, ಮನೆಯಲ್ಲಿದ್ದ ಅಜ್ಜಿಗೆ ವಿಷಯ ಗೊತ್ತಾಗಿದೆ. ಕೂಡಲೇ ಬಾಲಕನ ಬಳಿ ಹೋಗಿ ಅಜ್ಜಿ ದಬಾಯಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಬಾಲಕ, ಅಜ್ಜಿಯನ್ನೇ ಬೈದಿದ್ದಾನೆ.

ಅವಾಚ್ಯ ಪದಗಳಿಂದ ಅಜ್ಜಿಯನ್ನು ನಿಂದಿಸಿದ್ದಲ್ಲದೇ, ಚಪ್ಪಲಿಯಿಂದ ಅಜ್ಜಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈತನ ದಾಳಿಯಿಂದ ಅಜ್ಜಿಗೆ ಗಾಯಗಳಾಗಿವೆ. ಕಲಕೇರಿ ಠಾಣೆಯ ಪೊಲೀಸರು ಈ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...