alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಳು ಬಾವಿಯಲ್ಲಿತ್ತು ಕಾಲೇಜ್ ವಿದ್ಯಾರ್ಥಿನಿ ಶವ

rape mn 90

ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಶೃಂಗೇರಿಯ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಕೊಲೆಯಾದವರು. ಮಧ್ಯಾಹ್ನದ ವೇಳೆಯಲ್ಲಿ ಕಾಲೇಜ್ ಮುಗಿಸಿ ಆಕೆ ಮನೆಗೆ ಹೊರಟಿದ್ದರು.

ಶೃಂಗೇರಿಯಿಂದ ಅವರು ತಮ್ಮ ಹಳ್ಳಿಗೆ ಹೋಗುವಾಗ ಮಾರ್ಗಮಧ್ಯೆ ಅಡ್ಡಲಾದ ಪ್ರದೀಪ್ ಮತ್ತು ಸಂತೋಷ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇಬ್ಬರೂ ವಿಪರೀತ ಮದ್ಯ ಸೇವಿಸಿದ್ದು, ಒಂಟಿ ವಿದ್ಯಾರ್ಥಿನಿ ಮೇಲೆ ಮುಗಿಬಿದ್ದಿದ್ದಾರೆ. ಆಕೆ ಜೋರಾಗಿ ಕಿರುಚಿಕೊಂಡಿದ್ದು, ಆಗ ದುರುಳರು ಸಮೀಪದಲ್ಲಿದ್ದ ಪಾಳು ಬಾವಿಗೆ ಆಕೆಯನ್ನು ನೂಕಿ ಪರಾರಿಯಾಗಿದ್ದಾರೆ. ಕಾಲೇಜ್ ನಿಂದ ಮನೆಗೆ ಹೊರಟಿದ್ದ ಮಗಳು ನಾಪತ್ತೆಯಾಗಿದ್ದರಿಂದ ಅವರ ತಂದೆ ಹಾಗೂ ಮನೆಯವರೆಲ್ಲಾ ಸೇರಿ ಹುಡುಕಾಟ ನಡೆಸಿದ್ದಾರೆ.

ಕೊನೆಗೆ ಪಾಳು ಬಿದ್ದ ಬಾವಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರದೀಪ್ ಹಾಗೂ ಸಂತೋಷ್ ನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಲ್ಲಿ ಒಬ್ಬಾತ ಭಯದಿಂದ ವಿಷ ಸೇವಿಸಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...