alex Certify
ಕನ್ನಡ ದುನಿಯಾ       Mobile App
       

Kannada Duniya

ಜಮೀನಿಗೆ ಹೋದ ವಿವಾಹಿತೆ, ನಂತರ ನಡೆಯಿತು ಅನಾಹುತ..!

Murder 29

ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಪ್ರಶ್ನಿಸಿದ ವ್ಯಕ್ತಿಯನ್ನೇ, ಕೊಲೆ ಮಾಡಿದ ಘಟನೆ ಮುಜಾಫರ್ ನಗರ ಸಮೀಪ ನಡೆದಿದೆ. ಇಲ್ಲಿಗೆ ಸಮೀಪದ ಗೈಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಗೋರಾಯ್ ಎಂಬ ವ್ಯಕ್ತಿಯ ಮಗಳು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ, ಗ್ರಾಮದ ಮುಖಂಡ ಸಂಜಯ್ ಯಾದವ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮನೆಗೆ ಬಂದ ಪುತ್ರಿ ವಿಷಯ ತಿಳಿಸಿದ್ದರಿಂದ ನಗೋರಾಯ್ ಸೀದಾ ಸಂಜಯ್ ಮನೆಗೆ ಹೋಗಿ ಜಗಳ ಮಾಡಿದ್ದಲ್ಲದೇ, ಪೊಲೀಸರಿಗೆ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಜಯ್ ತನ್ನ ಬೆಂಬಲಿಗರೊಂದಿಗೆ ನಗೋರಾಯ್ ನನ್ನು ಹತ್ಯೆ ಮಾಡಿದ್ದಾನೆ. ನಗೋರಾಯ್ ಪುತ್ರಿ ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮದುವೆಯಾಗಿ ಗಂಡನ ಮನೆಯಲ್ಲಿದ್ದ ಮಗಳು ತವರು ಮನೆಗೆ ಬಂದಿದ್ದು, ಅಪ್ಪನ ಬದಲಿಗೆ ತಾನೇ ಜಮೀನಿಗೆ ಹುಲ್ಲನ್ನು ಕೊಯ್ಯಲು ಹೋಗಿದ್ದಳು.

ಆಕೆಯನ್ನು ಕಂಡ ಸಂಜಯ್ ಯಾದವ್, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನ ಕೈಯಿಂದ ತಪ್ಪಿಸಿಕೊಂಡು ಮನೆಗೆ ಬಂದವಳೇ, ಅಪ್ಪನಿಗೆ ನಡೆದ ವಿಷಯವನ್ನೆಲ್ಲಾ ಹೇಳಿದ್ದಾಳೆ. ಅಪ್ಪ, ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಮುಖಂಡನನ್ನು, ಪ್ರಶ್ನಿಸಲು ಹೋಗಿದ್ದ ಸಂದರ್ಭದಲ್ಲಿ ಅವರನ್ನು ಥಳಿಸಿ ಕೊಲೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...