alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಪ್ರಕರಣಗಳು ಕುರಿತು ಬಹಿರಂಗವಾಗಿದೆ ಶಾಕಿಂಗ್ ಸಂಗತಿ

ವಾಣಿಜ್ಯ ನಗರಿ ಮುಂಬೈನಲ್ಲಿ ಬೆಳಕಿಗೆ ಬರುವ ಅತ್ಯಾಚಾರ ಪ್ರಕರಣಗಳ ಪೈಕಿ ಶೇ.72 ರಷ್ಟು ಅತ್ಯಾಚಾರಗಳು ನಡೆದಿರುವುದು ಸಂತ್ರಸ್ಥೆಯರ ಗೆಳೆಯರಿಂದಲೇ ಎಂಬ ಶಾಕಿಂಗ್ ಸಂಗತಿ ಬಯಲಾಗಿದೆ. ಇದರಲ್ಲಿ ಬಹುತೇಕವು ಮದುವೆಯಾಗುವುದಾಗಿ ನಂಬಿಸಿ ಎಸಗಿದ ಕೃತ್ಯಗಳು ಎಂದು ತಿಳಿದು ಬಂದಿದೆ.

ಶೇ.72 ರಷ್ಟು ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯ ಗೆಳೆಯನೇ ಆರೋಪಿಯಾಗಿದ್ದರೆ, ಶೇ. 6 ರಷ್ಟು ಪ್ರಕರಣಗಳು ಮಾತ್ರ ಅಪರಿಚಿತರಿಂದ ನಡೆದಿದ್ದು, ಇನ್ನುಳಿದ ಪ್ರಕರಣಗಳಲ್ಲಿ ಸಂಬಂಧಿಕರು ಹಾಗೂ ಪರಿಚಿತರೇ ಅತ್ಯಾಚಾರವೆಸಗಿದ್ದಾರೆಂದು ಹೇಳಲಾಗಿದೆ. ಅದರಲ್ಲೂ ಮುಂಬೈಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕೆಲವರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸ ಮಾಡುತ್ತಿದ್ದು, ಸಂಬಂಧ ಬೆಳೆಸಿದ ಗೆಳೆಯ ವಿವಾಹವಾಗದೇ ಕೈ ಕೊಟ್ಟ ವೇಳೆ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎನ್ನಲಾಗಿದೆ.

ಇನ್ನುಳಿದಂತೆ ಬಹಳಷ್ಟು ಪ್ರಕರಣಗಳು ಹತ್ತಿರದ ಸಂಬಂಧಿಗಳು ಹಾಗೂ ಪರಿಚಿತರಿಂದ ನಡೆಯುತ್ತಿದ್ದು, ಮರ್ಯಾದೆಗೆ ಅಂಜಿ ದೂರು ದಾಖಲಿಸಲು ಜನರು ಹಿಂಜರಿಯುತ್ತಿದ್ದಾರೆ. ಯಾವುದೇ ಹಿಂಜರಿಕೆಯಿಲ್ಲದೇ ಪೊಲೀಸರಿಗೆ ದೂರು ನೀಡಿದರೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತದೆ. ಇದರಿಂದ ಇತರರು ಕೃತ್ಯ ಎಸಗಲು ಭಯಭೀತರಾಗುತ್ತಾರೆ ಎಂಬುದನ್ನು ಮನಗಾಣಬೇಕಿದೆ ಎಂದು ಪೊಲೀಸರು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...