alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರಿ ಮೇಲಿನ ಅತ್ಯಾಚಾರ ಆನಂದಿಸುತ್ತಿದ್ದ ಅಮ್ಮ!

rape-nm 852

ತಾಯಿಯನ್ನು ದೇವರೆಂದು ಹೇಳುತ್ತಾರೆ. ಮಮತಾಮಯಿ, ಕರುಣಾ ಮೂರ್ತಿ ಎಂದೆಲ್ಲಾ ಕರೆಯುತ್ತಾರೆ. ಆದರೆ, ಇದಕ್ಕೆ ಅಪವಾದ ಎನ್ನಬಹುದಾದ ಘಟನೆಯೊಂದು ನಡೆದಿದೆ. ಕೆಲವರು ವಿಕೃತ ಮನಸ್ಸಿನವರ ಬಗ್ಗೆ ಆಗಾಗ ಕೇಳಿರುತ್ತೀರಿ. ಅಂತಹ ಒಂದು ಪ್ರಕರಣದ ಸ್ಟೋರಿ ಇಲ್ಲಿದೆ ನೋಡಿ.

ತಾನು ಹೆತ್ತ ಮಗಳ ಮೇಲೆಯೇ ಯಾರಾದರೂ ಅತ್ಯಾಚಾರ ನಡೆಸುವಂತೆ, ಜಾಹೀರಾತು ನೀಡಿದ ವಿಕೃತ ಮನಸ್ಸಿನ ಮಹಿಳೆಯೊಬ್ಬಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಮೆರಿಕದ ವಾಷಿಂಗ್ಟನ್ ಮೇರಿಸ್ ವಿಲ್ಲೆಯಲ್ಲಿ
ವಾಸವಾಗಿದ್ದ ಮಹಿಳೆ, ತನ್ನ 6 ವರ್ಷದ ಮಗಳ ಮೇಲೆ ಹಣ ಕೊಟ್ಟವರು ಅತ್ಯಾಚಾರ ನಡೆಸಬಹುದು ಎಂದು ಜಾಹೀರಾತು ಪ್ರಕಟಿಸಿದ್ದಳು. ಕ್ರೈಗ್ಸ್ ಲಿಸ್ಟ್ ಎನ್ನುವ ವೆಬ್ ಸೈಟ್ ನಲ್ಲಿ ಮಹಿಳೆ ಹೀಗೆ ವಿಕೃತ ಜಾಹೀರಾತು
ನೀಡಿದ್ದನ್ನು ಗಮನಿಸಿದ ಪೊಲೀಸರು ಮನೆ ಮೇಲೆ ದಾಳಿ ಮಾಡಿದ್ದರು.

ದಾಳಿಯ ಸಂದರ್ಭದಲ್ಲಿ ಮನೆಯಲ್ಲಿ ಬಾಲಕಿಯ ಮೇಲೆ ಅಪರಿಚಿತರಿಂದ ಲೈಂಗಿಕ ಶೋಷಣೆ ನಡೆಯುತ್ತಿದ್ದ ಹಾಗೂ ಅದನ್ನು ತಾಯಿ ವೀಕ್ಷಿಸುತ್ತಿರುವ ಚಿತ್ರಗಳು, ವಿಡಿಯೋಗಳು ಪತ್ತೆಯಾಗಿದ್ದವು. ಮಹಿಳೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದು, ಎರಡು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ವಾಷಿಂಗ್ಟನ್ ಕೋರ್ಟ್ ಅವರಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆಕೆಯ ಪತಿಗೂ ಕೂಡ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...