alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ತಾಯಿಯಾದ ನಂತರ ಬಯಲಾಯ್ತು ರಹಸ್ಯ

gang-rape-

ಗದಗ: ತಾಯಿಯೇ ಮಕ್ಕಳಿಗೆ ಅತ್ಯಾಚಾರ ಎಸಗಲು ಕುಮ್ಮಕ್ಕು ನೀಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು, ಇದರಿಂದ ಬಾಲಕಿಯೊಬ್ಬಳು ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಮನೆಯಲ್ಲಿದ್ದ ಸಂಬಂಧಿಕರೊಬ್ಬರ ಮಗಳ ಮೇಲೆ ಈ ಕೃತ್ಯ ಎಸಗಲಾಗಿದೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಹಿಳೆಯೊಬ್ಬಳು, ತನ್ನ ಸಂಬಂಧಿಕರೊಬ್ಬರ ಮಗಳನ್ನು ಮನೆಯಲ್ಲಿಟ್ಟುಕೊಂಡಿದ್ದಳು. ಬಾಲಕಿಯ ತಾಯಿ ತೀರಿದ್ದು, ಮನೆಯಲ್ಲಿ ಬಡತನವಿದ್ದ ಕಾರಣ, ಆಕೆಯ ತಂದೆ ಕೆಲಸಕ್ಕೆ ಬೇರೆ ಊರಿಗೆ ಹೋಗಿದ್ದಾರೆ. ಮನೆಯಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ತನ್ನ ಇಬ್ಬರು ಮಕ್ಕಳಿಗೆ ಮಹಿಳೆಯೇ ಕುಮ್ಮಕ್ಕು ನೀಡಿದ್ದಾಳೆ. ಮನೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸಹೋದರರು, ಚಿತ್ರಹಿಂಸೆ ನೀಡಿ, ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದರೆನ್ನಲಾಗಿದೆ.

ಬಾಲಕಿಯ ತಂದೆ ಕೆಲಸದಿಂದ ವಾಪಾಸ್ ಬಂದ ನಂತರ, ವಿಷಯ ಬೆಳಕಿಗೆ ಬಂದಿದೆ. ಬಾಲಕಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ನರಗುಂದ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...