alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷ ನರಕ ಅನುಭವಿಸಿದ್ದಾಳೆ 10 ವರ್ಷದ ಬಾಲಕಿ

10 ವರ್ಷದ ಬಾಲಕಿಯೊಬ್ಬಳನ್ನು ಕಳೆದ 4 ವರ್ಷಗಳಲ್ಲಿ ಆಕೆಯ ಮಲತಾಯಿ ಹಾಗೂ ತಂದೆ ಹತ್ತಾರು ಪುರುಷರಿಗೆ ಮಾರಾಟ ಮಾಡಿದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ನಿರಂತರ ಅತ್ಯಾಚಾರ ಹಾಗೂ ದೈಹಿಕ ಹಿಂಸೆಯಿಂದ ಬಾಲಕಿ ನಲುಗಿ ಹೋಗಿದ್ದಾಳೆ.

60 ವರ್ಷದ ತಂದೆ ಹಾಗೂ 25 ವರ್ಷದ ಮಲತಾಯಿಯೊಂದಿಗೆ ಬಾಲಕಿ ವಾಸವಾಗಿದ್ಲು. ಕಳೆದ ಡಿಸೆಂಬರ್ ನಲ್ಲಿ ಜೈಪುರದ ರೈಲು ನಿಲ್ದಾಣದಲ್ಲಿ ಅಲೆಯುತ್ತಿದ್ದ ಬಾಲಕಿಯನ್ನು ಗಾಜಿಯಾಬಾದ್ ನ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಒಪ್ಪಿಸಲಾಗಿತ್ತು.

ಬಾಲಕಿಯ ಪೋಷಕರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ CWC ಪೊಲೀಸರಿಗೆ ಪತ್ರ ಬರೆದಿದೆ. ಬಾಲಕಿಯ ಮೈತುಂಬಾ ಸುಟ್ಟ ಗಾಯದ ಕಲೆಗಳಿವೆ. ಆಕೆಯ ತಂದೆ ಕಬ್ಬಿಣದ ರಾಡ್ ಅನ್ನು ಕಾಯಿಸಿ ಮಗುವಿಗೆ ಬರೆ ಹಾಕುತ್ತಿದ್ದ.

ನಾಲ್ಕು ವರ್ಷಗಳ ಹಿಂದೆ ಬಾಲಕಿಯ ತಂದೆ ಎರಡನೇ ಮದುವೆ ಮಾಡಿಕೊಂಡಿದ್ದ. ಮನೆಗೆಲಸವನ್ನೆಲ್ಲ ಮಗುವಿನಿಂದ್ಲೇ ಮಾಡಿಸುತ್ತಿದ್ದ ಮಲತಾಯಿ ಹೊಡೆದು ಬಡೆದು ಹಿಂಸಿಸುತ್ತಿದ್ಲು. ಕೊನೆಗೆ ವ್ಯಕ್ತಿಯೊಬ್ಬನಿಗೆ ಬಾಲಕಿಯನ್ನು ಮಾರಾಟ ಮಾಡಿದ್ದಾಳೆ.

ಆತ ಕೆಲದಿನಗಳ ಬಳಿಕ ಬಾಲೆಯನ್ನು ಇನ್ನೊಬ್ಬಳಿಗೆ ಸೇಲ್ ಮಾಡಿದ್ದ. ಈ ರೀತಿ ಕೋಲ್ಕತ್ತಾ, ಚಂಡೀಗಢ, ಜೋಧ್ಪುರ ಮತ್ತು ದೆಹಲಿ ಸೇರಿದಂತೆ ಹಲವೆಡೆ ಹತ್ತಾರು ಪುರುಷರ ಕೈಗೆ ಸಿಕ್ಕು ನರಳಿದ್ದಾಳೆ. ಒಮ್ಮೆ ಆಕೆ ತಪ್ಪಿಸಿಕೊಂಡು ಮನೆಗೆ ಮರಳಿದ್ಲು. ಆದ್ರೆ ಮತ್ತೆ ಮಲತಾಯಿ ಬಾಲಕಿಯನ್ನು ಮಾರಾಟ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...