alex Certify
ಕನ್ನಡ ದುನಿಯಾ       Mobile App
       

Kannada Duniya

ಅಡುಗೆ ಮನೆಯಲ್ಲೇ ಬಾಲಕಿ ಮೇಲೆರಗಿದ ಕಾಮುಕ, ಮನೆಯವರೆಲ್ಲ ಏನ್ಮಾಡ್ತಿದ್ರು ಗೊತ್ತಾ?

ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ. 2 ವರ್ಷಗಳ ಹಿಂದೆ ಸುರೇಂದರ್ ಎಂಬಾತ ಬಾಲಕಿಯನ್ನು ದೆಹಲಿಗೆ ಕರೆದುಕೊಂಡು ಬಂದಿದ್ದ. ಆಕೆಯ ಹೆತ್ತವರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

ಆಗಿನಿಂದ ಬಾಲಕಿ ಮತ್ತವಳ ಸೋದರರನ್ನು ಆರೈಕೆ ಮಾಡುವವರು ಯಾರೂ ಇರಲಿಲ್ಲ. ಇವರ ಮನೆಗೆ ಬಂದು ಸೇರಿಕೊಂಡ ಅಜ್ಜಿ 4000 ರೂಪಾಯಿಗೆ ಬಾಲಕಿಯನ್ನು ಸುರೇಂದರ್ ಗೆ ಮಾರಿಬಿಟ್ಟಿದ್ಲು. ಅವಳನ್ನು ದೆಹಲಿಗೆ ಕರೆತಂದ ಕಾಮುಕ, ಹೊಡೆದು ಬಡಿದು ಹಿಂಸಿಸಿ ಅತ್ಯಾಚಾರ ಮಾಡಿದ್ದ.

ನಂತರ ದೆಹಲಿಯ ಮನೆಯೊಂದರಲ್ಲಿ ಬಾಲಕಿಯನ್ನು ಕೆಲಸಕ್ಕಿಟ್ಟಿದ್ದ. ಅಂತೂ ಸುರೇಂದರ್ ನ ಕಾಟ ತಪ್ಪಿತಲ್ಲ ಅಂತಾ ಬಾಲಕಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ಲು. ಆದ್ರೆ ಆ ಸಮಾಧಾನ ಹೆಚ್ಚು ದಿನ ಇರಲಿಲ್ಲ. ತನ್ನ ಸ್ನೇಹಿತ ಮಣಿ ಮಿಶ್ರಾ ಎಂಬಾತನ ಮನೆಯಲ್ಲಿ ಬಾಲಕಿಯನ್ನು ಸುರೇಂದರ್ ಕೆಲಸಕ್ಕೆ ಸೇರಿಸಿದ.

ಮನೆಗೆಲಸ ಮಾಡಿ ಕಷ್ಟಪಟ್ಟು ಬಾಲಕಿ ಕೂಡಿಟ್ಟಿದ್ದ 30,000 ರೂಪಾಯಿಯನ್ನು ಮಣಿ ಮಿಶ್ರಾ ಕಿತ್ತುಕೊಂಡಿದ್ದ. ಅಡುಗೆ ಮನೆಯಲ್ಲಿ ಬಾಲಕಿ ಮೇಲೆ ಆತ ಅತ್ಯಾಚಾರ ಮಾಡುತ್ತಿದ್ರೆ, ಆತನ ಪತ್ನಿ ಮತ್ತು ಮಕ್ಕಳು ಅಲ್ಲೇ ಹೊರಗೆ ನಿಂತಿದ್ರು. ಕೈಕಾಲು ಕಟ್ಟಿಹಾಕಿ, ಸಿಗರೇಟ್ ನಿಂದ ಸುಡುತ್ತಿದ್ದ.

ಕೂಗಿಕೊಂಡ್ರೆ ಚಾಕುವಿನಿಂದ ಕೊಂದುಬಿಡುವುದಾಗಿ ಧಮ್ಕಿ ಹಾಕುತ್ತಿದ್ದ. ರೆಸ್ಟ್ ರೂಮಿಗೆ ಹೋಗಿದ್ದ ಬಾಲಕಿ, ಸಮೀಪದ ಮನೆಯಲ್ಲಿದ್ದ ಇಬ್ಬರು ಯುವಕರ ಬಳಿ ಅಳಲು ತೋಡಿಕೊಂಡಿದ್ದಾಳೆ. ಕೊನೆಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಗಳ ಬಂಧನಕ್ಕೂ ಬಲೆ ಬೀಸಿದ್ದಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...