alex Certify
ಕನ್ನಡ ದುನಿಯಾ       Mobile App
       

Kannada Duniya

ತಡರಾತ್ರಿ ಟೆರೇಸ್ ಮೇಲೆ ಬಂದವನು ಮಾಡಿದ್ದೇನು?

fire mar 8

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ, ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿದ ಘಟನೆ ಗ್ರೇಟರ್ ನೋಯ್ಡಾ ಸಮೀಪದ ತಿಗ್ರಿ ಎಂಬ ಹಳ್ಳಿಯಲ್ಲಿ ನಡೆದಿದೆ. ತೀವ್ರ ಸುಟ್ಟಗಾಯಗಳಾಗಿರುವ ಬಾಲಕಿಯನ್ನು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ.

ತಿಗ್ರಿ ಗ್ರಾಮದ 18 ವರ್ಷದ ಅಜಯ್ ಶರ್ಮ ಅತ್ಯಾಚಾರ ಎಸಗಿದ ಆರೋಪಿ. ಅದೇ ಗ್ರಾಮದ 16 ವರ್ಷದ ಬಾಲಕಿಯನ್ನು ಪ್ರೀತಿಸುತ್ತಿದ್ದ ಈತ, ಸೋಮವಾರ ಬೆಳಗಿನ ಜಾವ 2.30 ರ ಸುಮಾರಿಗೆ ಆಕೆಯ ಮನೆಗೆ ಬಂದಿದ್ದಾನೆ. ಇಬ್ಬರೂ ಟೆರೇಸ್ ಮೇಲೆ ಮಾತನಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಜಯ್ ಶರ್ಮ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಬಾಲಕಿ ಕೂಗಿಕೊಂಡಿದ್ದು, ಪೋಷಕರು ಆಸ್ಪತ್ರೆಗೆ ಸೇರಿಸಿದ್ದಾರೆ.

ಆಸ್ಪತ್ರೆಯಲ್ಲಿರುವ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಕೆಲವು ದಿನಗಳಿಂದ ಅಜಯ್ ಶರ್ಮ ತಮ್ಮ ಮಗಳ ಹಿಂದೆ ಬಿದ್ದಿದ್ದ. ಆತನ ಮನೆಯವರಿಗೆ ತಿಳಿಸಿದಾಗ, ಏನೂ ಆಗದೆಂದು ತಿಳಿಸಿದ್ದರು. ಆದರೆ, ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...