alex Certify
ಕನ್ನಡ ದುನಿಯಾ       Mobile App
       

Kannada Duniya

ತಂಗಿಯ ಮೇಲೆ ನಡೆದ ಅತ್ಯಾಚಾರ ಅಕ್ಕನಿಂದ ಬಯಲು

rape a 6

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಇದಕ್ಕೆ ಪೂರಕ ಎನ್ನುವಂತೆ ಕಾಮುಕನೊಬ್ಬ, ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್ಮುಗಂ ಅತ್ಯಾಚಾರ ಎಸಗಿದ ಆರೋಪಿ. ಪ್ರಕರಣ ನಡೆದು 6 ತಿಂಗಳ ನಂತರ ಬೆಳಕಿಗೆ ಬಂದಿದೆ. ಕಾರ್ಗಲ್ ನಿವಾಸಿಯಾಗಿರುವ ಆರ್ಮುಗಂ, ತನ್ನ ಮನೆಗೆ ಅಡಿಕೆ ಸುಲಿಯಲು ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಿಂದೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆರ್ಮುಗಂ, ನಂತರ ಕಾರ್ಗಲ್ ಸುತ್ತಮುತ್ತಲ ಗ್ರಾಮಗಳಲ್ಲಿ ಅಡಿಕೆ ಕೊಯ್ಲು ಮಾಡುತ್ತಿದ್ದ. ಸುಮಾರು 6 ತಿಂಗಳ ಹಿಂದೆ ಸಮೀಪದ ವಟ್ಟಕ್ಕಿ ಗ್ರಾಮದ ಬುದ್ಧಿಮಾಂದ್ಯ ಯುವತಿ ಅಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದಳು.

ಈ ಸಂದರ್ಭದಲ್ಲಿ ಆರೋಪಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯುವತಿಯ ದೇಹ ಸ್ಥಿತಿಯಲ್ಲಿ ಬದಲಾವಣೆ ಗಮನಿಸಿದ ಆಕೆಯ ಹಿರಿಯ ಸಹೋದರಿ, ವಿಚಾರಿಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ಕಾರ್ಗಲ್ ಠಾಣೆ ಪೊಲೀಸರು, ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...