alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲವೊಮ್ಮೆ ಇಂಥ ಅತ್ಯಾಚಾರಗಳೂ ನಡೆಯುತ್ತವೆ !

rape-court loan

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ ಎಂಬುದು ನಿಜ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಅತ್ಯಾಚಾರ ನಡೆಯದಿದ್ದರೂ, ಸುಳ್ಳು ದೂರು ದಾಖಲಿಸಿದ ಉದಾಹರಣೆಗಳು ಸಾಕಷ್ಟಿವೆ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ ನೋಡಿ.

ವ್ಯಕ್ತಿಯೊಬ್ಬರಿಗೆ ಸಾಲ ನೀಡಿದ್ದ ಮಹಿಳೆ, ಆತ ಸರಿಯಾದ ಸಮಯಕ್ಕೆ ಹಣ ವಾಪಸ್ ಕೊಡದ ಕಾರಣ ಅತ್ಯಾಚಾರದ ಸುಳ್ಳು ದೂರು ದಾಖಲಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಮಹಿಳೆ ತನಗೆ ಪರಿಚಯ ಇದ್ದ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂ. ಸಾಲವಾಗಿ ಕೊಟ್ಟಿದ್ದರು. 2014ರ ಜನವರಿಯಲ್ಲಿ ಹಣ ಕೊಡುವುದಾಗಿ ಹೋಟೆಲ್ ಕೊಠಡಿಯೊಂದಕ್ಕೆ ಕರೆಸಿಕೊಂಡ ವ್ಯಕ್ತಿ, ಪ್ರಜ್ಞೆ ತಪ್ಪಿಸುವ ಪಾನೀಯ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ದೂರು ನೀಡಿದ್ದಳು.

ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ ದೂರುದಾರ ಮಹಿಳೆ, ವಕೀಲರ ಸಲಹೆಯಂತೆ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಗಿ ತಿಳಿಸಿದ್ದಾಳೆ. ಅಲ್ಲದೇ, ಸಾಲ ಪಡೆದ ವ್ಯಕ್ತಿ ಕಂತಿನಲ್ಲಿ ಹಣ ಪಾವತಿಸುವುದಾಗಿ ಒಪ್ಪಿದ್ದಾಗಿ ಹೇಳಿದ್ದಾಳೆ. ನ್ಯಾಯಾಲಯ ವಿಚಾರಣೆಯ ಬಳಿಕ ಅತ್ಯಾಚಾರ ಆರೋಪಿಯಾಗಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...