alex Certify
ಕನ್ನಡ ದುನಿಯಾ       Mobile App
       

Kannada Duniya

ರೇಪಿಸ್ಟ್ ಗಳ ಸುಳಿವು ನೀಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋ

Crime-against-Women3

ಮೈಸೂರು: ಸಹಾಯ ಮಾಡುವ ನೆಪದಲ್ಲಿ, ಅಸ್ಸಾಂ ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳಿಗೆ ಮೈಸೂರಿನ 7ನೇ ಎಡಿಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪುಟ್ಟಸ್ವಾಮಿ ಹಾಗೂ ಶಂಕರ್ ಶಿಕ್ಷೆಗೆ ಒಳಗಾದ ಆರೋಪಿಗಳು.

2013 ರಲ್ಲಿ ಮೂವರು ಅಸ್ಸಾಂ ಯುವತಿಯರು ಸರ್ಕಸ್ ಕೆಲಸಕ್ಕೆ ಬಂದಿದ್ದು, ಕುಶಾಲನಗರದಿಂದ ಮೈಸೂರಿಗೆ ಹೊರಟಿದ್ದರು. ಪಿರಿಯಾಪಟ್ಟಣ ಸಮೀಪ ಅವರು ನಿಂತಿದ್ದನ್ನು ಕಂಡ, ಪುಟ್ಟಸ್ವಾಮಿ ಹಾಗೂ ಶಂಕರ್ ಆಟೋದಲ್ಲಿ ಡ್ರಾಪ್ ಮಾಡುವುದಾಗಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಪಿರಿಯಾಪಟ್ಟಣ ಸಮೀಪದ ಕಂಪಲಾಪುರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮೂವರು ಯುವತಿಯರಲ್ಲಿ ಒಬ್ಬಳು ತಪ್ಪಿಸಿಕೊಂಡಿದ್ದಳು. ಬಳಿಕ ಸಂತ್ರಸ್ಥೆಯರು ಪಿರಿಯಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.

ಆಟೋದಲ್ಲಿ ನಟ ದರ್ಶನ್ ಫೋಟೋ ನೋಡಿದ್ದಾಗಿ ಯುವತಿಯರು ಹೇಳಿದ್ದರಿಂದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಅಲ್ಲದೇ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಅತ್ಯಾಚಾರ ಎಸಗಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...