alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರ-ಸಹೋದರಿ ಮುಂದೆ ಅತ್ಯಾಚಾರವೆಸಗಿದ್ದ ಬಾಬಾ

ಮಧ್ಯಪ್ರದೇಶದ ಇಂಧೋರ್ ನಲ್ಲಿ ಸಾಧುವೊಬ್ಬನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ಬಾಲಕಿ ಮೇಲೆ ಬಾಬಾ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಸಹೋದರ-ಸಹೋದರಿ ಮುಂದೆಯೇ ಈ ಬಾಬಾ ಬಾಲಕಿ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಬಾನನ್ನು ಬಂಧಿಸಿದ್ದಾರೆ.

ಕನಾಡಿಯಾದ ಖಾತ್ರಿಖೇಡಾದಲ್ಲಿ ಅವದೇಶಾದಾಸ್ ನ ಆಶ್ರಮವಿದೆ. ಪೀಡಿತ ಬಾಲಕಿ ಈ ಆಶ್ರಮದಲ್ಲಿ ಬಂಧಿಯಾಗಿದ್ದಳು ಎನ್ನಲಾಗಿದೆ. ಎರಡು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗನನ್ನು 7 ಸಾವಿರ ರೂಪಾಯಿಗೆ ಆಶ್ರಮಕ್ಕೆ ಮಾರಾಟ ಮಾಡಿದ್ದ.

ಸಾಧು ಮಕ್ಕಳನ್ನು ಬಂಧಿಸಿಟ್ಟಿದ್ದ ಎನ್ನಲಾಗಿದೆ. ಅದ್ರಲ್ಲಿ ಹಿರಿ ವಯಸ್ಸಿನ ಹುಡುಗಿಯನ್ನು ಅತ್ಯಾಚಾರವೆಸಗಿದ್ದಾನೆ. ಪೀಡಿತ ಬಾಲಕಿ 8ನೇ ತರಗತಿ ಓದುತ್ತಿದ್ದಳು ಎನ್ನಲಾಗಿದೆ. ಆಕೆ ತನ್ನ ಕಷ್ಟವನ್ನು ಆಕೆ ಸ್ನೇಹಿತರಿಗೆ ಹೇಳಿದ್ದಾಳೆ. ಊರಿನ ಮಕ್ಕಳೆಲ್ಲ ಸಾಧು ಭೇಟಿ ಮಾಡಿ ಬಾಲಕಿ ಬಿಡುವಂತೆ ಕೋರಿಕೊಂಡಿದ್ದಾರೆ.

ಬಾಲಕಿ ಸೇರಿದಂತೆ ನಾಲ್ಕು ಮಕ್ಕಳನ್ನು 7 ಸಾವಿರ ನೀಡಿ ಖರೀದಿ ಮಾಡಿದ್ದೇನೆ. 7 ಸಾವಿರ ನೀಡಿದಲ್ಲಿ ಮಕ್ಕಳನ್ನು ಬಿಡುತ್ತೇನೆಂದು ಸಾಧು ಹೇಳಿದ್ದಾನೆ. ಆ ನಂತ್ರ ಮಕ್ಕಳು ಗ್ರಾಮದಲ್ಲಿ ಚಂದಾ ಸಂಗ್ರಹಿಸಲು ಶುರುಮಾಡಿದ್ದಾರೆ. ಮಕ್ಕಳ ಈ ಕೆಲಸದ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಸತ್ಯ ಹೊರಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...