alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಶೌಚಾಲಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

ಮಧ್ಯಪ್ರದೇಶದ ಜಬಲ್ಪುರದ ಸಾರ್ವಜನಿಕ ಶೌಚಾಲಯದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಚೈತ್ರ ನವರಾತ್ರಿಯ ಎರಡನೇ ದಿನ ಭಜರಂಗ ಬಾಡಾ ನೇತಾ ಕಾಲೋನಿಯ ಸಾರ್ವಜನಿಕ ಶೌಚಾಲಯದಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಬಾಲಕಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ.

ಜ್ಯೋತಿ ಎಂಬಾಕೆ ತನ್ನ ಸ್ನೇಹಿತೆ ಪ್ರಿಯಾಳನ್ನು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿದ್ರೆಯಿಂದ ಎಬ್ಬಿಸಿದ್ದಳು. ಪ್ರಿಯಾ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದಾಳೆ. ಮೊದಲೇ ಅಲ್ಲಿ ಕಾದು ಕುಳಿತಿದ್ದ ದುಷ್ಟ ಬಾಲಕಿ ಬಾಯಿ ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ. ಜ್ಯೋತಿ ಶೌಚಾಲಯಕ್ಕೆ ಹೋದಾಗ ವಿಷ್ಯ ಗೊತ್ತಾಗಿದೆ.

ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ಆತನ ಹುಡುಕಾಟ ನಡೆಸಿದ್ದಾರೆ ಪೊಲೀಸರು. ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಸಿಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಒಂದು ವರ್ಷದಲ್ಲಿ 4527 ರೇಪ್ ಕೇಸ್ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...