alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 30 ನಿಮಿಷದಲ್ಲಿ ಸಿದ್ಧವಾಯ್ತು ರಾಮ್ ರಹೀಮ್ 2 ಪಾಸ್ ಪೋರ್ಟ್..!

ಜನ ಸಾಮಾನ್ಯರಿಗೆ ಒಂದು ಪಾಸ್ಪೋರ್ಟ್ ಪಡೆಯೋದೆ ಕಷ್ಟದ ಕೆಲಸ. ಹೀಗಿರುವಾಗ ಅತ್ಯಾಚಾರಿ ರಾಮ್ ರಹೀಮ್ ಎರಡೆರಡು ಪಾಸ್ ಪೋರ್ಟ್ ಹೊಂದಿದ್ದ. ಎಲ್ಲ ನಿಯಮವನ್ನು ಗಾಳಿಗೆ ತೋರಿ 30 ನಿಮಿಷದಲ್ಲಿ ಒಂದಲ್ಲ ಎರಡು ಪಾಸ್ ಪೋರ್ಟ್ ಪಡೆದಿದ್ದ ರಾಮ್ ರಹೀಮ್.

ಡೇರಾ ಸಚ್ಚಾ ಆಶ್ರಮದ ಮೇಲೆ ದಾಳಿ ನಡೆಸಿದ ವೇಳೆ ಈ ಪಾರ್ಸ್ ಪೋರ್ಟ್ ಪೊಲೀಸ್ ಕೈಗೆ ಸಿಕ್ಕಿದೆ. ಪೊಲೀಸರು ಪಾಸ್ ಪೋರ್ಟನ್ನು ವಿದೇಶಾಂಗ ಸಚಿವಾಲಯಕ್ಕೆ ನೀಡಿದ್ದಾರೆ. ವಿದೇಶಾಂಗ ಸಚಿವಾಲಯ ತನಿಖೆ ನಡೆಸುತ್ತಿದೆ. ತನಿಖೆ ಸಂದರ್ಭದಲ್ಲಿ ಪಾಸ್ ಪೋರ್ಟ್ ನೀಡುವ ವೇಳೆ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ವಿಷ್ಯ ಗೊತ್ತಾಗಿದೆ. ಜೊತೆಗೆ ರಾಮ್ ರಹೀಮ್ ಸುಳ್ಳು ಮಾಹಿತಿ ನೀಡಿದ್ದಾನೆ ಎಂಬುದು ಬಹಿರಂಗವಾಗಿದೆ.

ಹರ್ಯಾಣ ಸರ್ಕಾರ ಹಾಗೂ ಪಾಸ್ ಪೋರ್ಟ್ ನ ಕೆಲ ಅಧಿಕಾರಿಗಳು ಇದ್ರಲ್ಲಿ ಶಾಮೀಲಾಗಿದ್ದಾರೆಂಬ ಸತ್ಯ ಹೊರಬಿದ್ದಿದೆ. 2015ರಲ್ಲಿ ರಾಮ್ ರಹೀಮ್ ಪಡೆದ ಮೊದಲ ಪಾಸ್ ಪೋರ್ಟ್ ನಲ್ಲಿ ಕ್ಯಾಪ್ ಧರಿಸಿದ್ದ. ಕ್ಯಾಪ್ ಧರಿಸೋದು ಪಾಸ್ ಪೋರ್ಟ್ ನಿಯಮದ ವಿರುದ್ಧವಾಗಿದೆ. ಇದಲ್ಲದೆ ಇನ್ನೂ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...