alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಪ್ರಿಯತಮೆಗೆ 6 ಬಾರಿ ಇರಿದ ಪ್ರೇಮಿ

ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಮದುವೆಯಾಗಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವಕ, ನಡುರಸ್ತೆಯಲ್ಲೇ ಇರಿದು ಕೊಲೆ ಮಾಡಿದ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ.

ಬೋರ್ಕೇದಾ ಏರಿಯಾದ ಶಬೀರ್ ಕೊಲೆ ಆರೋಪಿ. ಈತ ಯುವತಿಯನ್ನು ಪ್ರೀತಿಸಿದ್ದು, ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ, ಶಬೀರ್ ನಡತೆ ಸರಿ ಇಲ್ಲದ ಕಾರಣ ಯುವತಿ ನಿಶ್ಚಿತಾರ್ಥವನ್ನು ರದ್ದುಪಡಿಸಿದ್ದಾಳೆ.

ಇದರಿಂದ ಆಕ್ರೋಶಗೊಂಡ ಶಬೀರ್ ಭೀಮಗಂಜನಮಡಿಯಲ್ಲಿ ಯುವತಿಯನ್ನು ಅಡ್ಡಗಟ್ಟಿ ಅರ್ಧ ಡಜನ್ ಗೂ ಅಧಿಕ ಸಲ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...