alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹಂತಕ ಶಂಭುಲಾಲ್ ಜೈಲಲ್ಲಿ ಮಾಡಿರೋ ವಿಡಿಯೋ

ಮಾಲ್ಡಾದ ಕಾರ್ಮಿಕ ಅಫ್ರಾಜುಲ್ ಖಾನ್ ಎಂಬಾತನನ್ನು ಹತ್ಯೆ ಮಾಡಿದ್ದ ಶಂಭುಲಾಲ್ ರೇಗರ್ ಎಂಬಾತ ಸದ್ಯ ಜೋಧ್ಪುರ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಇದೀಗ ಆತನ ಎರಡು ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಸಹಖೈದಿಯಿಂದ ತನಗೆ ಜೀವ ಬೆದರಿಕೆ ಇದೆ ಎಂದಿರೋ ಶಂಭುಲಾಲ್, ಮುಸ್ಲಿಂರ ವಿರುದ್ಧವಾಗಿ ಮಾತನಾಡಿದ್ದಾನೆ. ವಸುದೇವ್ ಬ್ರಾಹ್ಮಣ್ ಎಂಬ ಸಹಖೈದಿ ತನ್ನೊಂದಿಗೆ ಸ್ನೇಹ ಬೆಳೆಸಿದ್ದ. ಆದರೆ ಆತ ಬ್ರಾಹ್ಮಣನಲ್ಲ, ಜಿಹಾದಿ ಅನ್ನೋದು ನನಗೆ ಗೊತ್ತಾಗಿದೆ.

ನನ್ನನ್ನು ಹತ್ಯೆ ಮಾಡಲು ಆತನನ್ನು ಕಳಿಸಲಾಗಿದೆ ಅಂತಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಜಾಕೆಟ್ ಹಾಗೂ ಇಯರ್ ಫೋನ್ ಹಾಕಿಕೊಂಡು ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಓದುವಂತೆ ಮಾತನಾಡಿದ್ದಾನೆ. ಹಿಂದು ಯುವತಿಯೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಅಫ್ರಾಜುಲ್ ನನ್ನು ಕೊಂದಿರೋದಾಗಿ ತಿಳಿಸಿದ್ದಾನೆ.

ಆದ್ರೆ ತಾನು ಮಾಡಿರೋ ಕೃತ್ಯದ ಬಗ್ಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ ಎಂದಿದ್ದಾನೆ. ಜೈಲಿನ ಸ್ನಾನದ ಕೋಣೆಯಲ್ಲಿ ಈ ವಿಡಿಯೋ ಮಾಡಿದ್ದಾರೆ ಅಂತಾ ಶಂಕಿಸಲಾಗಿದೆ. ಆದ್ರೆ ಶಂಭುಲಾಲ್ ಗೆ ಮೊಬೈಲ್ ಕೊಟ್ಟಿಲ್ಲ, ಬೇರೆ ಯಾರದ್ದೋ ಮೊಬೈಲ್ ಬಳಸಿ ಈ ರೀತಿ ಮಾಡಿದ್ದಾನೆ ಅಂತಾ ಜೈಲು ಅಧಿಕಾರಿಗಳು ಹೇಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...