alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನನ್ನೇ ಕೊಂದ ತಂದೆ…! ಕಾರಣವೇನು ಗೊತ್ತಾ?

ರಾಜಸ್ಥಾನದ ಭರತ್ಪುರ್ ಎಂಬಲ್ಲಿ ತಂದೆಯೊಬ್ಬರು ತನ್ನ 17ವರ್ಷದ ಹಿರಿಯ ಮಗನನ್ನೇ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಜೂನ್ 29 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಭರತ್ಪುರ್ ಜಿಲ್ಲೆಯ ಗ್ರಾಮವೊಂದರ ಪಂಚಾಯ್ತಿ ಪ್ರಮುಖರು ದೂರು ನೀಡಿದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಕೊಲೆ ಆರೋಪದಲ್ಲಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ತನ್ನ ಸೋದರ ಸಂಬಂಧಿ ಯುವತಿಯನ್ನೇ ಮಗ ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕಾಗಿ ಮಗನನ್ನೇ ತಂದೆ ಕೊಲೆ ಮಾಡಿದ್ದಾರೆ.

ತನ್ನ ಸೋದರ ಸಂಬಂಧಿ ಮೇಲೆ ಅವರ ಮಗ ಈ ಹಿಂದೆಯೇ ಲೈಂಗಿಕ ದೌರ್ಜನ್ಯ ನಡೆಸಿದ್ದ. ಜೂನ್ 25 ರಂದು ಆಕೆಯನ್ನ ಅತ್ಯಾಚಾರ ಮಾಡೋಕೆ ಪ್ರಯತ್ನಿಸಿದ. ಜೂನ್ 28 ರಂದು ಈ ವಿಚಾರವನ್ನ ತಿಳಿದ ತಂದೆ ಕುಪಿತರಾಗಿ ಮಗನನ್ನ ರಾತ್ರೋರಾತ್ರಿ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ತೋಟದಲ್ಲೇ ಅವನ ದೇಹವನ್ನ ದಹನ ಮಾಡಿದ್ದಾರೆ.

ಪಂಚಾಯ್ತಿ ಪ್ರಮುಖರಿಗೆ ಯುವಕನ ಆಕಸ್ಮಿಕ ಮರಣದ ಬಗ್ಗೆ ಅನುಮಾನ ಬಂದು ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ತಂದೆಯನ್ನ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...