alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಪ್ರಕರಣದಲ್ಲಿ ಈ ರಾಜಧಾನಿಗೆ ಅಗ್ರಸ್ಥಾನ

ಛತ್ತೀಸ್ಗಡದ ರಾಜಧಾನಿ ರಾಯ್ಪುರ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ರಾಯ್ಪುರ ಅಗ್ರಸ್ಥಾನದಲ್ಲಿದೆ. 2017ರಲ್ಲಿ ರಾಯ್ಪುರ ಸುತ್ತಮುತ್ತ 60 ಸಾಮೂಹಿಕ ಅತ್ಯಾಚಾರ ನಡೆದಿದೆ. 1847 ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಾಯ್ಪುರ ಒಂದರಲ್ಲೇ 189 ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಎರಡನೇ ಸ್ಥಾನದಲ್ಲಿ ದುರ್ಗ್ ಜಿಲ್ಲೆಯಿದ್ರೆ ಮೂರನೇ ಸ್ಥಾನದಲ್ಲಿ ಸರ್ಗುಜಾ ಜಿಲ್ಲೆಯಿದೆ. ಇಲ್ಲಿ 110 -120 ಅತ್ಯಾಚಾರ ಪ್ರಕರಣ ದಾಖಲಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಅತ್ಯಾಚಾರದ ಅಂಕಿ-ಸಂಖ್ಯೆ ನೀಡಲಾಗಿದ್ದು, ರಾಯ್ಪುರ ತಲೆ ತಗ್ಗಿಸುವಂತಾಗಿದೆ.

ವರದಿ ಪ್ರಕಾರ  2014ರಲ್ಲಿ 1502 ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 2015ರಲ್ಲಿ 1628 ಪ್ರಕರಣ ದಾಖಲಾಗಿತ್ತು. 2016ರಲ್ಲಿ 1700 ದಾಖಲಾಗಿದ್ರೆ 2017ರಲ್ಲಿ ಶೇಕಡಾ 12ರಷ್ಟು ಅತ್ಯಾಚಾರ ಪ್ರಕರಣ ಏರಿಕೆಯಾಗಿದೆ. ದಾಖಲೆ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...