alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಲೆ ನಂತ್ರ ಸೆಲ್ಫಿ ತೆಗೆದಿದ್ದ ಕಳ್ಳ..!

raigarh_murder__1495734755_749x421

ಛತ್ತೀಸಗಢದ ರಾಯಗಢದಲ್ಲಿ ಕೊಲೆಗೆ ಸಂಬಂಧಿಸಿದಂತೆ ಭಯಾನಕ ವಿಷಯವೊಂದು ಹೊರ ಬಿದ್ದಿದೆ. ಕೊಲೆಗೈದ ಆರೋಪಿಯೊಬ್ಬ ನಂತ್ರ ಸೆಲ್ಫಿ ತೆಗೆದುಕೊಂಡಿದ್ದಾನೆ. ಇದನ್ನು ಆರೋಪಿ ಫೇಸ್ಬುಕ್ ಗೆ ಅಪ್ಲೋಡ್ ಮಾಡುವವನಿದ್ದ ಎಂಬ ವಿಷ್ಯ ತಿಳಿದಿದೆ.

ರಾಯಗಢದಲ್ಲಿ ನೀಲೇಶ್ ಎಂಬಾತ ತರಕಾರಿ ಅಂಗಡಿ ನಡೆಸುತ್ತಿದ್ದ. ರಾತ್ರಿ ಅಂಗಡಿಯಲ್ಲಿಯೇ ಮಲಗಿದ್ದಾನೆ. ಅಂಗಡಿಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಆತನನ್ನು ನೋಡಿದ ನೀಲೇಶ್ ಆತನ ಜೊತೆ ಗಲಾಟೆ ಮಾಡಿದ್ದಾನೆ. ಇಬ್ಬರು ಬಡಿದಾಡಿಕೊಂಡಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಕಳ್ಳ ನೀಲೇಶ್ ನನ್ನು ಕೊಲೆಗೈದಿದ್ದಾನೆ.

ನೀಲೇಶ್ ಶವದ ಜೊತೆಗೆ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳ್ಳ ಜೀವನ್, ನೀಲೇಶ್ ಮನೆಯಲ್ಲಿಯೇ ಅಡಗಿ ಕುಳಿತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಜೀವನ್ ಫೋನ್ ವಶಕ್ಕೆ ಪಡೆದ ಪೊಲೀಸರಿಗೆ ಫೋಟೋ ಸಿಕ್ಕಿದೆ. ಕೊಲೆ ನಂತ್ರ ತೆಗೆದ ಫೋಟೋವನ್ನು ಫೇಸ್ಬುಕ್ ಗೆ ಹಾಕುವನಿದ್ದೆ ಎಂದು ಕಳ್ಳ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...