alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಾಗಿ ಪತಿ ಹಾಲಿಗೆ ವಿಷ ಬೆರೆಸಿದ್ಲು…ಆದ್ರೆ!?

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಗಂಡನ ಹತ್ಯೆಗೆ ಹಾಲಿನಲ್ಲಿ ವಿಷ ಬೆರೆಸಿದ್ದಾಳೆ. ಆದ್ರೆ ಈ ವಿಷಯುಕ್ತ ಹಾಲಿನಿಂದ ಲಸ್ಸಿ ತಯಾರಿಸಿ ಕುಡಿದ ಗಂಡನ ಮನೆಯ ಇತರ 13 ಮಂದಿ ಸಾವನ್ನಪ್ಪಿದ್ದಾರೆ. ಇದ್ರ ಹಿಂದೆ ಮಹಿಳೆ ಪ್ರೇಮಿ ಕೂಡ ಶಾಮೀಲಾಗಿದ್ದಾನೆ ಎನ್ನಲಾಗಿದೆ.

ಮಹಿಳೆ ಹೆಸರು ಆಶಿಯಾ. ಬಲವಂತವಾಗಿ ಈಕೆಗೆ ಮದುವೆ ಮಾಡಿಸಲಾಗಿತ್ತು. ಆಶಿಯಾ ಬೇರೆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ತನ್ನ ಪ್ರೀತಿಗೆ ಅಡ್ಡಿಯಾದ ಗಂಡನನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಳು. ಹಾಲಿನಲ್ಲಿ ವಿಷ ಬೆರೆಸಿ  ಗಂಡನಿಗೆ ನೀಡಿದ್ದಳು. ಯಾವುದೋ ಕಾರಣಕ್ಕೆ ಪತಿ ಹಾಲು ಕುಡಿದಿರಲಿಲ್ಲ. ನಂತ್ರ ಈ ಹಾಲನ್ನು ಮಜ್ಜಿಗೆ ಮಾಡಲಾಗಿದ್ದು, ಅದ್ರಿಂದ ಮನೆಯವರು ಲಸ್ಸಿ ತಯಾರಿಸಿದ್ದಾರೆ.

ಮನೆಯಲ್ಲಿದ್ದ ಎಲ್ಲರೂ ಲಸ್ಸಿ ಕುಡಿದಿದ್ದಾರೆ ಎನ್ನಲಾಗಿದೆ. ಅದ್ರಲ್ಲಿ 13 ಮಂದಿ ಸಾವನ್ನಪ್ಪಿದ್ದು, 14 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ ಹಾಲಿನಲ್ಲಿ ವಿಷ ಬೆರೆಸಿದ್ದೆ ಎಂಬ ವಿಷ್ಯವನ್ನು ಬಾಯ್ಬಿಟ್ಟಿದ್ದಾಳೆ. ಮಹಿಳೆ ಹಾಗೂ ಆಕೆ ಪ್ರೇಮಿ ವಿರುದ್ಧ ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...