alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ಬಾರಿ ಸೆಕ್ಸ್ ನಿರಾಕರಿಸಿದ್ದಕ್ಕೆ ಇಂಥ ಶಿಕ್ಷೆ ನೀಡಿದ ಸಲಿಂಗಕಾಮಿ

ಪುಣೆ ನಗರ ಪೊಲೀಸರು ಸಲಿಂಗಕಾಮಿಯೊಬ್ಬನನ್ನು ಬಂಧಿಸಿದ್ದಾರೆ. ಸಲಿಂಗಕಾಮಿ ತನ್ನ ಪುರುಷ ಸಂಗಾತಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ.

ಸಲಿಂಗಕಾಮಿಗಳಿಬ್ಬರ ಮಧ್ಯೆ ಅನೇಕ ವರ್ಷಗಳಿಂದ ಸಂಬಂಧವಿತ್ತು ಎನ್ನಲಾಗಿದೆ. ಮಂಗಳವಾರ ಆರೋಪಿ, ದೂರು ದಾಖಲಿಸಿದ ವ್ಯಕ್ತಿ ಮನೆಗೆ ಹೋಗಿದ್ದಾನೆ. ರಾತ್ರಿ ಇಬ್ಬರೂ ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಬೆಳಿಗ್ಗೆ ಮತ್ತೆ ಸಂಬಂಧ ಬೆಳೆಸುವಂತೆ ದೂರುದಾರ ಒತ್ತಾಯ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ.

ಗಲಾಟೆ ಅತಿರೇಕಕ್ಕೆ ಹೋಗಿದ್ದು, ಆರೋಪಿ, ದೂರುದಾರನಿಗೆ ಚಾಕು ಇರಿದಿದ್ದಾನೆ. ಘಟನೆಯಲ್ಲಿ ದೂರುದಾರನಿಗೆ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...