alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ, ಇಬ್ಬರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ, ಕಾರಣ…?

ಪುಣೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 38 ವರ್ಷದ ನಿಲೇಶ್ ಚೌಧರಿ ನೇಣಿಗೆ ಕೊರಳೊಡ್ಡಿದ್ದ. ಆತನ ಪತ್ನಿ ನೀಲಂ, ಮಕ್ಕಳಾದ ಶ್ರಾವಣಿ ಹಾಗೂ ಶ್ರೇಯಾಳ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ.

ಆರ್ಥಿಕ ಸಮಸ್ಯೆಯಿಂದ ಬಳಲಿದ್ದ ನಿಲೇಶ್, ಪತ್ನಿ ಮತ್ತು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಹೇಳಲಾಗ್ತಿದೆ. ನಿಲೇಶ್ ಪ್ಲಾಸ್ಟಿಕ್ ರಿಮೋಲ್ಡಿಂಗ್ ಬ್ಯುಸಿನೆಸ್ ನಡೆಸ್ತಾ ಇದ್ದ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರೋದಾಗಿ ಬರೆದಿಟ್ಟಿದ್ದಾನೆ. ನಿಲೇಶ್ ಮನೆಯ ಸೀಲಿಂಗ್ ಗೆ ನೇಣು ಹಾಕಿಕೊಂಡಿದ್ದ. ತಾನು ಸಾಯುವ ಮುನ್ನ ಪತ್ನಿ ಮತ್ತು ಮಕ್ಕಳಿಗೆ ವಿಷ ಕುಡಿಸಿರುವ ಶಂಕೆ ವ್ಯಕ್ತವಾಗಿದೆ. ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...