alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಪತಿ ಈಗ..

turkey-husbandwife

ಮನುಷ್ಯ ಹಣ ಗಳಿಸಲು ಏನು ಬೇಕಾದ್ರೂ ಮಾಡ್ತಾನೆ. ಎಂತ ಕೆಟ್ಟ ಕೆಲಸಕ್ಕೆ ಬೇಕಾದ್ರೂ ಇಳಿಯುತ್ತಾನೆ. ನಂತ್ರ ತಾನು ಹೆಣೆದ ಬಲೆಯಲ್ಲಿಯೇ ಬಲಿಯಾಗ್ತಾನೆ ಎಂಬುದಕ್ಕೆ  ಟರ್ಕಿಯ ಇಸ್ತಾಂಬುಲ್ ನಲ್ಲಿರುವ ಒಬ್ಬ ವ್ಯಕ್ತಿ ಉತ್ತಮ ನಿದರ್ಶನ. ಹಣ ಗಳಿಸಲು ತನ್ನ ಹೆಂಡತಿಯನ್ನೇ ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಿದ್ದ ಈ ಪತಿರಾಯ ಕೊನೆಗೆ ಜೀವ ಕಳೆದುಕೊಂಡಿದ್ದಾನೆ.

ವರದಿ ಪ್ರಕಾರ 26 ವರ್ಷದ ಅಬ್ದುಲ್ ಕಾದಿರ್ ಎಂಬಾತ ತನ್ನ ಪತ್ನಿ ಕಾಗಲ್ ಎಂಬಾಕೆಯನ್ನು ಬೇರೆ ಪುರುಷರೊಂದಿಗೆ ಕಳುಹಿಸುತ್ತಿದ್ದನಂತೆ. ಆದ್ರೆ ಕಾಗಲ್ ಗೆ ತನ್ನ ಗ್ರಾಹಕನ ಮೇಲೆಯೇ ಪ್ರೀತಿ ಹುಟ್ಟಿದೆ. ಗಂಡನನ್ನು ಬಿಟ್ಟು ಆತನ ಜೊತೆ ವಾಸ ಮಾಡಲು ಶುರುಮಾಡಿದ್ದಾಳೆ.

ಗ್ರಾಹಕನ ಜೊತೆ ರಾತ್ರಿ ಕಳೆದ ಕಾಗಲ್, ವಾಪಸ್ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಆತ ಹೊಡೆಯುತ್ತಾನೆಂದು ಹೇಳಿದ್ದಾಳೆ. ಮನೆಗೆ ಬರದ ಪತ್ನಿಯನ್ನು ಹುಡುಕಿಕೊಂಡು ಅಬ್ದುಲ್, ಕ್ಲೈಂಟ್ ಮನೆಗೆ ಬಂದಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಕಾಗಲ್ ಇಷ್ಟಪಟ್ಟಿದ್ದ ವ್ಯಕ್ತಿಯ ಸ್ನೇಹಿತರು ಅಬ್ದುಲ್ ಕಾದಿರ್ ಕಾರಿನ ಮೇಲೆ ಯರ್ರಾಬಿರ್ರಿ ಗುಂಡು ಹಾರಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಹೋದ ಅಬ್ದುಲ್ ಸಾವನ್ನಪ್ಪಿದ್ದಾನೆ. ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಕಾಗಲ್ ಸೇರಿ ದಾಳಿ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...