alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ನಿರ್ಮಾಪಕ ಅರೆಸ್ಟ್

nir mar 18

ಸಿನೆಮಾಗಳಲ್ಲಿ ಚಾನ್ಸ್ ಕೇಳಿಕೊಂಡು ನಿತ್ಯವೂ ಹಲವಾರು ಮಂದಿ ಬರುತ್ತಾರೆ. ಹೀಗೆ ಬಂದವರಿಗೆಲ್ಲಾ ಅವಕಾಶ ಸಿಗುವುದಿಲ್ಲ. ಆದರೆ, ಕೆಲವರು ಹೀಗೆ ಅವಕಾಶ ಕೇಳಿಕೊಂಡು ಬಂದ ಮುಗ್ಧರನ್ನು, ವಂಚಿಸಿರುವ ಅದೆಷ್ಟೋ
ಪ್ರಕರಣ ನಡೆದಿವೆ.

ಹೀಗೆ, ಸಿನೆಮಾಗಳಲ್ಲಿ ಅವಕಾಶ ಕೇಳಿಕೊಂಡು ಬಂದ ಯುವತಿಯರನ್ನು ವಂಚಿಸುತ್ತಿದ್ದ, ನಕಲಿ ನಿರ್ಮಾಪಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅವಿನಾಶ್ ಬಂಧಿತ ಆರೋಪಿ. ಈತ ತಾನು ಸಿನೆಮಾ ನಿರ್ಮಾಪಕನೆಂದು ಹೇಳಿಕೊಂಡು ಪೋಸ್ ಕೊಡುತ್ತಿದ್ದ. ಅಲ್ಲದೇ, ತಾನಿಗಾಗಲೇ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ನಿಮಗಾಗಿ ಹೊಸ ಸಿನೆಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದ. ಈತನ ವಿರುದ್ಧ ಬರೋಬ್ಬರಿ 28 ಪ್ರಕರಣ ದಾಖಲಾಗಿದ್ದವು.

ಬೆಂಗಳೂರು ರಾಜಗೋಪಾಲ ನಗರ ಠಾಣೆಯ ಪೊಲೀಸರು, ದೂರು ದಾಖಲಾದ ನಂತರ ತನಿಖೆ ಕೈಗೊಂಡು, ಮುಗ್ಧ ಯುವತಿಯರಿಗೆ ಅವಕಾಶ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಅವಿನಾಶ್ ನನ್ನು ಬಂಧಿಸಿದ್ದಾರೆ. ಚಾನ್ಸ್ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಅವಿನಾಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...