alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸ ಮಾಡಿದ ಪ್ರೇಮಿಗೆ ಪಾಠ ಕಲಿಸಲು ಮುಂದಾದ್ಲು ಗರ್ಭಿಣಿ

download

ಮದುವೆ ಆಸೆ ತೋರಿಸಿ ಪ್ರೇಮಿ ಜೊತೆ ಪ್ರಿಯಕರನೊಬ್ಬ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಆಕೆ ಗರ್ಭಿಣಿ ಎಂಬ ಸುದ್ದಿ ಕೇಳ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ್ದಾನೆ. ಮೋಸ ಮಾಡಿದ ಬಾಯ್ ಫ್ರೆಂಡ್ ಗೆ ಬುದ್ದಿ ಕಲಿಸಲು ಹುಡುಗಿ ಮುಂದಾಗಿದ್ದಾಳೆ.

ಘಟನೆ ನಡೆದಿರುವುದು ಡೆಹ್ರಾಡೂನ್ ನಲ್ಲಿ. ಎಲೆಕ್ಟ್ರಾನಿಕ್ ಶೋರೂಂ ಒಂದರಲ್ಲಿ ಕೆಲಸ ಮಾಡ್ತಿದ್ದ 8 ತಿಂಗಳ ಗರ್ಭಿಣಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಶೋರೂಂ ನಲ್ಲಿ ಕೆಲಸ ಮಾಡ್ತಿದ್ದ ನಿತಿನ್ ಎಂಬಾತ ಮದುವೆಯಾಗುವುದಾಗಿ ನಂಬಿಸಿದ್ದಾನೆ. 2016 ರಲ್ಲಿ ಈಕೆ ಗರ್ಭಿಣಿಯಾಗಿದ್ದಾಳೆ. ಈ ವೇಳೆ ನಿತಿನ್ ಗೆ ಮದುವೆಯಾಗುವಂತೆ ಕೇಳಿದ್ರೆ ಆತ ಹಾಗೂ ಆತನ ತಾತ ಕೆಲ ಪೇಪರ್ ಮೇಲೆ ಇವಳು ಹಾಗೂ ಇವಳ ತಾಯಿಯ ಸಹಿ ಹಾಕಿಸಿಕೊಂಡಿದ್ದಾರೆ.

2015ರಲ್ಲಿಯೇ ಇವರಿಬ್ಬರಿಗೂ ಮದುವೆಯಾಗಿದೆ ಎಂದು ಒಂದು ಕಾಗದದ ಮೇಲೆ ಬರೆದಿತ್ತು. ಆದಷ್ಟು ಬೇಗ ಮನೆಗೆ ಕರೆದೊಯ್ಯುತ್ತೇನೆಂದು ದೆಹಲಿಗೆ ಹೋದ ನಿತಿನ್ ವಾಪಸ್ ಬರಲಿಲ್ಲ. ಫೋನ್ ಬಂದ್ ಆಗಿದ್ದು, ನಿತಿನ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗ್ತಿಲ್ಲ. ನಿತಿನ್ ವಿರುದ್ಧ ರೇಪ್ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...